ಬೆಂಗಳೂರು: ಚಾಲಕನ ನಿಯಂತ್ರಣ ಕಳೆದುಕೊಂಡ ಕೆಎಸ್ಆರ್ಟಿಸಿ ಬಸ್ ಮೈಸೂರು ರಸ್ತೆಯ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದಿರುವ ಘಟನೆಯಿಂದ ನಮ್ಮ ಮೆಟ್ರೋ ಪಿಲ್ಲರ್ ಗೆ ಯಾವುದೇ ಡ್ಯಾಮೇಜ್ ಆಗಿಲ್ಲ ಎಂದು ಬಿಎಂಆರ್ ಸಿ ಎಲ್ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಎಂಆರ್ ಸಿಎಲ್ ಜ್ಞಾನಭಾರತಿ ಮತ್ತು ಪಟ್ಟಣಗೆರೆ ಮೆಟ್ರೋ ನಿಲ್ದಾಣದ ನಡುವಿನ ಪಿಲ್ಲರ್ ನಂ 545ರ ಮೀಡಿಯನ್ ಹ್ಯಾಂಡ್ ರೈಲ್ ಮತ್ತು ಕ್ಯಾಶ್ - ಬ್ಯಾರಿಯರ್ ಮೇಲೆ KSRTC ಬಸ್ ಅಪ್ಪಳಿಸಿದೆ.
ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಎಲ್ಲಾ ಪಿಲ್ಲರ್ ಗಳಲ್ಲಿ ಕ್ಯಾಶ್ - ಬ್ಯಾರಿಯರ್ ಅನ್ನು ಒದಗಿಸಿ ರುವುದರಿಂದ ಯಾವುದೇ ರಚನಾ ತ್ಮಕ ಹಾನಿಯಾಗಿಲ್ಲ. ಪಿಲ್ಲರ್ 545 ರಲ್ಲಿ ಕೇವಲ ಮೇಲ್ನೋಟದ ಗೀರ್ ಗಳು ಕಂಡು ಬಂದಿದೆ.
ಮೀಡಿಯನ್ ಹಾಗೂ ಉಕ್ಕಿನ ರೇಲಿಂಗ್ ಗೆ ಉಂಟಾದ ಹಾನಿ ಯನ್ನು ಹೊರತುಪಡಿಸಿ ಮೇಲಿನ ಅಪಘಾತದ ಪರಿಣಾಮ ಮೇಲ್ನೋಟದ ರಚನೆಯ ಮೇಲೆ ಇಲ್ಲದಿರುವ ಕಾರಣ ಮೆಟ್ರೋ ಕಾರ್ಯಚರಣೆ ಸುರಕ್ಷಿತವಾಗಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
PublicNext
09/05/2022 10:07 pm