ಬೆಂಗಳೂರು : ನೈಸ್ ರಸ್ತೆಯಲ್ಲಿ ಭೀಕರ ಅಪಘಾತ, ಸ್ಥಳದಲ್ಲೇ ಕಾಲೇಜು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಇಂದು ಸಂಜೆ ಸಂಭವಿಸಿದೆ.
ಹೌದು ನೈಸ್ ರಸ್ತೆಯಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಇತ್ತೀಚೆಗೆ ಮಾಮೂಲಾಗಿದೆ. ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಇಂದು ಸಂಜೆ ಹೋಂಡಾ ಸಿಟಿ ಕಾರು ( KA05-MQ-0855) ಚಾಲಕ 22 ವರ್ಷದ ಸುಮುಖ್ ಎಂಬಾತ ತನ್ನ ಸ್ನೇಹಿತೆ 19 ವರ್ಷದ ಲೀನಾನಾಯ್ಡು ಎಂಬುವವರೊಂದಿಗೆ ನೈಸ್ ರಸ್ತೆಯ ಮೂಲಕ PES ಕಾಲೇಜ್ ಕಡೆಯಿಂದ ಸೊಂಪುರ ಕಡೆಗೆ ವೇಗವಾಗಿ ಬರುವಾಗ ಈ ಅಪಘಾತ ಸಂಭವಿಸಿದೆ.
ಇನ್ನು ಅತೀಯಾದ ವೇಗ ಮತ್ತು ನಿರ್ಲಕ್ಷದಿಂದ ಕಾರು ಚಲಾಯಿಸುತ್ತಿದ್ದ ಸುಮುಖ್ BDA ಟೋಲ್ ಬಳಿ ನಿಯಂತ್ರಣ ತಪ್ಪಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಬಸ್ ಗೆ ( KA51-D-5678) ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆತಕ್ಕೆ ಎರಡು ವಾಹನಗಳು ಪಲ್ಟಿಯಾಗಿದ್ದು, ಹೋಂಡಾ ಸಿಟಿ ಕಾರಿನಲ್ಲಿದ್ದ ಇಬ್ಬರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಬಸ್ ಚಾಲಕನ ಕಾಲಿಗೆ ತೀವ್ರ ಗಾಯವಾಗಿದ್ದು ಪ್ರಯಾಣಿಕರಿಗೂ ಸಹ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಕಾರು ಡಿಕ್ಕಿಯಾದ ಕಾರಣ ಕಾರಿನ ಟೈರ್ ಕಿತ್ತುಹೋಗಿದೆ. ಇನ್ನು ಹೋಂಡಾ ಸಿಟಿ ಕಾರು ಪಾರ್ಚುನರ್ ಕಾರ್ ಗೆ (/KA01MN-7758 ) ಡಿಕ್ಕಿ ಹೊಡೆದ ಪರಿಣಾಮ ಆ ಕಾರು ಕೂಡ ಜಖಂಗೊಂಡಿದೆ.
PublicNext
05/05/2022 09:40 pm