ಹೊಸಕೋಟೆ: ಕಾರ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದ ಸಂತೆಗೇಟ್ ಬಳಿ ನಡೆದಿದೆ.
ಹೊಸಕೋಟೆ ಮೂಲದ ಬೈಕ್ ಸವಾರ ಅರುಣ್ ಕುಮಾರ್ ಗಾಯಗೊಂಡಿದ್ದಾರೆ..ಹೊಸಕೋಟೆಯಿಂದ ಚಿಂತಾಮಣಿ ಕಡೆ ಹೋಗುತ್ತಿದ್ದ ಬೈಕ್ ಹಾಗೂ ಚಿಂತಾಮಣಿಯಿಂದ ಹೊಸಕೋಟೆ ಕಡೆ ಬಂದ ಕಾರ್ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಹಾಗೂ ಕಾರು ಜಖಂಗೊಂಡಿವೆ.. ಗಾಯಾಳು ಅರುಣ್ ಕುಮಾರ್ ನನ್ನು ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ...
Kshetra Samachara
18/04/2022 08:18 pm