ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕ BBMP ಚೀಫ್ ಇಂಜಿನಿಯರ್ ಕಚೇರಿಯಲ್ಲಿ ಬೆಂಕಿ ಅವಘಡ- ದಾಖಲೆ ನಾಶ

ಯಲಹಂಕ: ಸರ್ಕಾರಿ ಕಚೇರಿಗಳ ಮೇಲೆ ಎಸಿಬಿ ದಾಳಿಯಾಗುತ್ತದೆ. ಮತ್ತೆ ತಿಂಗಳೊಳಗೆ ಅದೇ ಕಚೇರಿ ರೆಕಾರ್ಡ್ಸ್ ರೂಮ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಬೀಳುತ್ತದೆ. ಇದು ನಿರೀಕ್ಷಿತವೋ ಅಥವಾ ಉದ್ದೇಶಪೂರ್ವಕ ಬೆಂಕಿ ದಾಳಿಯೋ ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಬೇಕಿದೆ.

ತಿಂಗಳ ಹಿಂದೆ ಯಲಹಂಕ ಬಿಬಿಎಂಪಿ ವಲಯ ಕಚೇರಿ ಮೇಲೆ ದಾಳಿಯಾಗಿ ಭ್ರಷ್ಟ ಅಧಿಕಾರಿಗಳ ಕರ್ಮಕಾಂಡ ಬಯಲಾಗಿತ್ತು. ದಾಳಿಯಾಗಿ ತಿಂಗಳು ಕಳೆಯುವ ಮುನ್ನವೇ ಯಲಹಂಕ ವಲಯ ಬಿಬಿಎಂಪಿ ಮುಖ್ಯ ಕಚೇರಿ ಬ್ಯಾಟರಾಯನಪುರ ಚೀಪ್ ಇಂಜಿನಿಯರ್ ಕಚೇರಿಗೆ ಬೆಂಕಿ ಬಿದ್ದು, ಮಹತ್ವದ ದಾಖಲೆ ಸುಟ್ಟು ಹೋಗಿವೆ. ದುರಂತವೆಂದರೆ ರೆಕಾರ್ಡ್ಸ್ ರೂಮ್‌ಗೆ ಹೊಂದಿಕೊಂಡ ಮುಖ್ಯಾಭಿಯಂತರ ರಂಗನಾಥ್ ಅವರ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಬ್ಯಾಟರಾಯನಪುರ ಚೀಫ್ ಇಂಜಿನಿಯರ್ ಕ್ಯಾಬಿನ್‌ನಲ್ಲಿ ಎ.ಸಿ.ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಎರಡನೇ ಫ್ಲೋರಿನ ಮುಖ್ಯ ಇಂಜಿನಿಯರ್ ಕಚೇರಿಗೆ ಹೊಂದಿಕೊಂಡೆ ರೆಕಾರ್ಡ್ಸ್ ರೂಮ್ ಸಹ ಇದ್ದು ಬೆಂಕಿ ಕಾಣಿಸಿಕೊಂಡ ಬಗ್ಗೆ ಅನೇಕ ಅನುಮಾನ ಮೂಡಿವೆ. ಬೆಂಕಿಬಿದ್ದ ಕೂಡಲೇ ಯಲಹಂಕ ಮತ್ತು ಹೆಬ್ಬಾಳ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ..

ಬೆಂಕಿ ದುರಂತದಲ್ಲಿ ಕೆಲ ಮಹತ್ವದ ದಾಖಲೆ ಬೆಂಕಿಗಾಹುತಿಯಾಗಿವೆ. ಆದರೆ ಅಧಿಕಾರಿಗಳು ಏನೂ ಅಗಿಲ್ಲ, ಆಕಸ್ಮಿಕ‌ ಬೆಂಕಿ ಎಂದಷ್ಟೆ ಹೇಳ್ತಿದ್ದಾರೆ. ಅಮೃತಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಬೆಂಕಿ ದುರಂತಕ್ಕೆ ಕಾರಣ ಮತ್ತು ಕಾರಣರಾದವರ ಪತ್ತೆ ಹಚ್ಚಿದಾಗ ಸತ್ಯಾಂಶ ಹೊರಬೀಳಲಿದೆ.

SureshBabu Public Next ಯಲಹಂಕ..

Edited By : Manjunath H D
PublicNext

PublicNext

16/04/2022 05:28 pm

Cinque Terre

44.9 K

Cinque Terre

1

ಸಂಬಂಧಿತ ಸುದ್ದಿ