ಆನೇಕಲ್: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಆನೇಕಲ್ ಪಟ್ಟಣದ ಮುತ್ಯಾಲಮಡುವು ಕ್ರಾಸ್ ಬಳಿ ಸಂಭವಿಸಿದೆ. ಈ ಅಪಘಾತ ದೃಶ್ಯದ ವೀಡಿಯೊ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ದ್ವಿಚಕ್ರ ವಾಹನದಲ್ಲಿದ್ದ ನಾಗರಾಜು ಹಾಗೂ ಅಶ್ವತ್ಥ್ ರೇಷನ್ ತೆಗೆದುಕೊಂಡು ಮನೆಗೆ ಹೋಗುತ್ತಿದ್ದರು. ಆಗ ತಮಿಳುನಾಡಿನಿಂದ ಆನೇಕಲ್ ಪಟ್ಟಣಕ್ಕೆ ಬರುತ್ತಿದ್ದ ಮಾರುತಿ ಕಾರು ಅತಿ ವೇಗವಾಗಿ ಚಲಿಸಿದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿದೆ. ಗಂಭೀರ ಗಾಯಗಳಾದ ವ್ಯಕ್ತಿಗಳು ಆನೇಕಲ್ ಪಟ್ಟಣ ಮುತ್ತೂರು ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ.
ಇನ್ನು, ಇದೇ ಜಾಗದಲ್ಲಿ ನಾಲ್ಕು ಅಪಘಾತಗಳು ಸಂಭವಿಸಿದ್ದು ರಸ್ತೆ ಅಗಲೀಕರಣ ಮಾಡಿದಾಗ ನಾಮಫಲಕಗಳನ್ನು ಹಾಕದಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ಮಾಡಿ ಪರಿಶೀಲನೆ ನಡೆಸಿದರು.
Kshetra Samachara
12/04/2022 08:53 am