ಯಲಹಂಕ:- ಇಂದು ಬೆಳಗ್ಗೆ 6-30ರ ಸುಮಾರಿಗೆ ಯಲಹಂಕ ಉಪನಗರದ ಕೈಗಾರಿಕಾ ಪ್ರದೇಶದಲ್ಲಿರುವ Dicoflex Paper & Tapes ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಸುಮಾರು 50ರಿಂದ 60 ಲಕ್ಷ ಬೆಲೆಬಾಳುವ ಯಂತ್ರೋಪಕರಣ, ಕಾಗದದ ಬಂಡಲ್ಸ್, ಸಾಧನ ಸಾಮಗ್ರಿ ಸುಟ್ಟು ಕರಕಲಾಗಿವೆ.
ಬೆಂಕಿ ಆಕಸ್ಮಿಕದ ದುರಂತ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಯಲಹಂಕ ಅಗ್ನಿಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಮೂರುಮಹಡಿಯ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಕಾಗದದ ಗೋಡೌನ್ ಇತ್ತು. ಇಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ದುರಂತ ಸಂಭವಿಸಿ ಕಾರ್ಖಾನೆಯ ಶೇ 80 ರಷ್ಟು ವಸ್ತುಗಳು ಸುಟ್ಟುಕರಕಲಾಗಿವೆ.
23 ವರ್ಷಗಳಿಂದ ಕಂಪನಿಯನ್ನು ನಡೆಸಲಾಗುತ್ತಿತ್ತು. ಯುಗಾದಿ ಹಬ್ಬದ ಪ್ರಯುಕ್ತ ಹತ್ತಕ್ಕು ಹೆಚ್ಚು ಜನ ಮನೆಗಳಿಗೆ ತೆರಳಿದ್ದರು. ಆದ್ದರಿಂದ ಸಾವು ನೋವು ಸಂಭವಿಸಿಲ್ಲ. ಕಂಪನಿಗೆ ಇನ್ಶೂರೆನ್ಸ್ ಇದ್ದು, ನಾವು ಮುಂಜಾಗ್ರತೆ ವಹಿಸಿದ್ದೇವೆ. ಆದರೂ ದುರಂತ ಸಂಭವಿಸಿದೆ. ಈಗಾಗಲೇ ಯಲಹಂಕ ಉಪನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ.
ಯಲಹಂಕ, ಹೆಬ್ಬಾಳ, ಬಾಣಸವಾಡಿ, ಹೈಗ್ರೌಂಡ್ಸ್ ಗಳ 5 ಅಗ್ನಿ ಶಾಮಕ ವಾಹನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಯುಗಾದಿ ಹಬ್ಬದ ಪ್ರಾರಂಭದಲ್ಲಿ ಕಾಗದ ಕಾರ್ಖಾನೆಯ ಬೆಂಕಿ ಎಲ್ಲವನ್ನು ಬಲಿ ಪಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ, ಇದೇ ಸಮಾಧಾನಕರ ವಿಷಯವಾಗಿದೆ.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ.
PublicNext
01/04/2022 01:17 pm