ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ನೇಹಿತರ ಜೊತೆ ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಬಾಲಕ ಸಾವು.

ಆನೇಕಲ್: ಸ್ನೇಹಿತರೊಡನೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ಈಜು ಬಾರದೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ಕೆರೆಯಲ್ಲಿ ನಡೆದಿದೆ..

ಅಭಿಷೇಕ್ (13) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವಿದ್ಯಾರ್ಥಿ.. ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಇಡ್ಲಬೆಲೆಯಲ್ಲಿ ವಾಸವಾಗಿದ್ದ ಆಶೋಕ ಎಂಬಾತನ ಮಗನಾದ ಅಭಿಷೇಕ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಅದೇ ಶಾಲೆಯ 7 ಜನ ವಿದ್ಯಾರ್ಥಿಗಳು ಬಳ್ಳೂರು ಕೆರೆಗೆ ನಿನ್ನೆ ಮಧ್ಯಾಹ್ನ 2 ಗಂಟೆಗೆ ಈಜಲು ಹೋಗಿದ್ರು. ಬಳಿಕ ಅಭಿಷೇಕ್ ಈಜು ಬಾರದೆ ಕೆರೆಯಲ್ಲಿ ಮುಳುಗಿದ್ದಾನೆ..ನಂತರ ವಿದ್ಯಾರ್ಥಿಗಳು ಭಯಪಟ್ಟು ಮನೆಗೆ ವಾಪಸಾಗಿದ್ದರು . ವಿಷಯವನ್ನು ಯಾರಿಗೆ ಹೇಳಿದೆ ಸುಮ್ಮನಾಗಿದ್ದರು

ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಬಳಿಕ ಪೊಲೀಸರು ವಿದ್ಯಾರ್ಥಿಗಳನ್ನು ಕರೆಸಿ ವಿಚಾರಣೆ ಮಾಡಿದಾಗ ವಿದ್ಯಾರ್ಥಿಗಳು ಸತ್ಯ ಹೇಳಿದ್ದಾರೆ. ಇನ್ನು ಅಗ್ನಿಶಾಮಕದಳ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹುಡುಕಾಟ ನಡೆಸಿ ಶವವನ್ನು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Edited By : Manjunath H D
Kshetra Samachara

Kshetra Samachara

29/03/2022 10:23 pm

Cinque Terre

6.13 K

Cinque Terre

0

ಸಂಬಂಧಿತ ಸುದ್ದಿ