ಬೆಂಗಳೂರು: ಉಲ್ಲಾಳ್ ವಾರ್ಡ್‌ನ ಮಂಗನಳ್ಳಿ ಸಮೀಪದಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಎರಡು ಜೀವಗಳು ಬಲಿಯಾಗಿವೆ. ತಂದೆ ಶಿವರಾಜು, ಮಗಳು ಚೈತನ್ಯ ಮೃತ ದುರ್ದೈವಿಗಳು.
ಈ ಘಟನೆಗೆ ಕಾರಣರಾದ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದರು. ಕೇವಲ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಇಡೀ ಕುಟುಂಬದಲ್ಲಿ ಓರ್ವ ಗೃಹಿಣಿ ಉಳಿದಿರುವುದು, ಚೈತನ್ಯ ತಾಯಿ ವೃದ್ಧೆ ರತ್ನಮ್ಮ ಜೀವನಕ್ಕೆ ಆಧಾರ ಕಲ್ಪಿಸಬೇಕಿದೆ. ಒಂದು ಕೋಟಿ ಪರಿಹಾರ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಬೇಕು ಎಂದು ಆಂಬುಲೆನ್ಸ್ ತಡೆದು ಪ್ರತಿಭಟನೆ ನಡೆಸಿದರು.
PublicNext
24/03/2022 07:55 pm