ಬೆಂಗಳೂರು: ಹೆಬ್ಬಾಳದ ಪ್ಲೇ ಓವರ್ ಮೇಲೆ ಅಪಘಾತದಲ್ಲಿ ಮೃತಳಾದ ಬಾಲಕಿ ನೆನದು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕಣ್ಣೀರು ಹಾಕಿದ್ದಾರೆ. ಪೊಲೀಸ್ರು ಅಂದ್ರೆ ಕನಿಕರ ಇಲ್ಲದವರು ಅಂತ ಸದಾ ಮೂದಲಿಸ್ತಾರೆ. ಆದ್ರೆ ಇಂದು ಕಸದ ಲಾರಿಗೆ ಸಿಲುಕೆ ಮೃತ ಪಟ್ಟ ಅಕ್ಷಯ ಪ್ರಾಣ ಬಿಟ್ಟಿದ್ದನ್ನ ಕಣ್ಣಾರೆ ಕಂಡ ಆರ್.ಟಿ.ನಗರ ಸಂಚಾರ ಪಿಸಿ ಮಾಧುರಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಘಟನೆ ನಡೆದಾಗ ಸ್ಪಾಟ್ ನಲ್ಲಿದ್ದ ಮಾಧುರಿ ಇದಕ್ಕೂ ಮೊದಲು ಡಿವೈಡರ್ ಕ್ರಾಸ್ ರಸ್ತೆ ದಾಟುವವವರಿಗೆ ಎಚ್ಚರಿಕೆ ನೀಡ್ತಿದ್ರು. ಮಾಧುರಿ ವಾಹನಗಳನ್ನು ಸ್ಲೋ ಮಾಡುವಂತೆ ಸಿಗ್ನಲ್ ಮಾಡಿ ರಸ್ತೆ ದಾಟಿಸ್ತಿದ್ರು. ಶಾಲಾ ಇತರ ಮಕ್ಕಳು ರಸ್ತೆ ದಾಟಿದ್ದರು. ಅಷ್ಟರಲ್ಲಿಯೇ ಅಕ್ಷಯ ಪ್ರಾಣ ಬಿಟ್ಟಿದ್ಳು. ಈ ವೇಳೆ ಅಲ್ಲೆ ಇದ್ದ ಮಾಧುರಿ ಅದನ್ನ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
PublicNext
21/03/2022 07:27 pm