ಬೆಂಗಳೂರು: ಪೊಲೀಸರು ಅಂದ್ರೆ ಅವರನ್ನ ಸಮಾಜ ರಕ್ಷಕರು, ಅಂತಾರೆ. ಆದ್ರೆ ಕೆಲವೊಮ್ಮೆ ಅವರು ಪ್ರಾಣ ರಕ್ಷಕರೂ ಆಗ್ತಾರೆ. ಎಲ್ಲಾ ಆದ್ಮೆಲೆ ಪೊಲೀಸ್ರು ಬರ್ತಾರೆ ಅನ್ನೋದು ಕೇವಲ ಸಿನಿಮಾ ಡೈಲಾಗ್. ಇಂದು ಪೊಲೀಸರ ಸಮಯಪ್ರಜ್ಞೆಯಿಂದ ನೂರಾರು ಜೀವಗಳು ಉಳಿದಿವೆ
ಯೆಸ್.. ಇಂದು ಮಧ್ಯಾಹ್ನ ಗಾಂಧಿನಗರ ಸುಖ ಸಾಗರ್ ಹೋಟೆಲ್‌ನಲ್ಲಿ ಇದ್ದಕ್ಕಿದ್ದಂತೆ ಅಗ್ನಿ ಅವಘಡ ಸಂಭವಿಸಿದೆ. ಮೇಲ್ಛಾವಣಿಯಲ್ಲಿ ದಟ್ಟವಾಗಿ ಹೊಗೆ ಬರುತ್ತಿದ್ದರೂ ಜನರು ಮಾತ್ರ ತಮ್ಮ ಪಾಡಿಗೆ ತಾವಿದ್ದರು. ಈ ಸಮಯದಲ್ಲಿ ಅದೇ ಜಾಗದಲ್ಲಿ ಬಂದೋಬಸ್ತ್‌ನಲ್ಲಿದ್ದ ಪಿಎಸ್‌ಐ ರವಿ ಕೂಡಲೇ ಸಾರ್ವಜನಿಕರಿಗೆ ಅಲರ್ಟ್ ಮಾಡಿ ಹೊಟೇಲ್‌ನಿಂದ ಹೊರಗೆ ಕಳುಹಿಸಿದ್ರು. ಅಲ್ಲದೇ ಫೈರ್ ಡಿಪಾರ್ಟ್‌ಮೆಂಟ್‌ಗೂ ಕರೆ ಮಾಡಿ ಅಲ್ಲಿದ್ದ ನಾಗರಿಕರನ್ನ ಹೊರಗೆ ಕಳುಹಿಸಿ ಹಲವರ ಜೀವ ಉಳಿಸಿದ್ದಾರೆ. ಇನ್ನೂ ನೋಡ ನೋಡ್ತಿದ್ದಂತೆ ಬೆಂಕಿ ಹೆಚ್ಚಾಗಿದ್ದು ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಎರಡು ಅಗ್ನಿಶಾಮಕ ದಳ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
09/03/2022 06:25 pm