ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಲಿಸುತ್ತಿದ್ದ ಕ್ಯಾಂಟರ್ ಗೆ ಬೆಂಕಿ; ಪೀಠೋಪಕರಣ ಸಮೇತ ವಾಹನ ಭಸ್ಮ

ಬೆಂಗಳೂರು: ಚಲಿಸುತ್ತಿದ್ದ ಕ್ಯಾಂಟರ್ ವಾಹನದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕ್ಯಾಂಟರ್ ಸುಟ್ಟು ಕರಕಲಾಗಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಐಟಿಐ ಗೇಟ್ ಮುಂಭಾಗದಲ್ಲಿ ನಡೆದಿದೆ.

ಬೆಳಿಗ್ಗೆ ಸುಮಾರು 8.30 ರ ಸಮಯದಲ್ಲಿ ಮೈಸೂರಿಂದ ಹೊರಮಾವು ಕಡೆ ಶ್ರೀನಿವಾಸ್ ಎಂಬುವವರಿಗೆ ಸೇರಿದ ಮನೆಯ ದಿನ ಬಳಕೆಯ ಪೀಠೋಪಕರಣಗಳು ಹಾಗೂ ಇನ್ನಿತರ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ನೋಡ ನೋಡುತ್ತಿದಂತೆ ಬೆಂಕಿ ಸಂಪೂರ್ಣವಾಗಿ ಆವರಿಸಿಕೊಂಡು ಕ್ಯಾಂಟರ್ ಸುಟ್ಟು ಕರಕಲಾಗಿದೆ. ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಐಟಿಐನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು ಸಹಾಯಕ್ಕೆ ಧಾವಿಸಿ ನೀರು ಹಾಕಿ ಬೆಂಕಿ ನಂದಿಸಲು ಮುಂದಾದರು.

ಘಟನೆಯ ಮಾಹಿತಿ ತಿಳಿದ ಮಹದೇಹಪುರ ಹಾಗೂ ಬಾಣಸವಾಡಿಯ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಹೊತ್ತಿ ಉರಿಯುತ್ತಿದ್ದ ಕ್ಯಾಂಟರ್ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

Edited By : Nagesh Gaonkar
PublicNext

PublicNext

26/02/2022 08:48 pm

Cinque Terre

53.76 K

Cinque Terre

1

ಸಂಬಂಧಿತ ಸುದ್ದಿ