ಬೆಂಗಳೂರು: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮೂರು ವರ್ಷ ಮಗು ಮತ್ತು ವ್ಯಕ್ತಿಯೊಬ್ಬರ ಜೀವನವೇ ಈಗ ಅಸ್ತವ್ಯಸ್ತವಾಗಿದೆ. ಜೆಪಿ ನಗರ 7 ನೇ ಹಂತ, ಆರ್ ಬಿ ಐ ಲೇಔಟ್ ನಲ್ಲಿ ಫೆಬ್ರವರಿ 19 ರ ಬೆಳಗ್ಗೆ ಮೂರು ವರ್ಷದ ತನ್ಮಯ್ ಮತ್ತು 40 ವರ್ಷದ ಧನಂಜಯ್ ಗೆ ಕರೆಂಟ್ ಶಾಕ್ ಹೊಡೆದಿದೆ.
ಹೌದು. ಕರೆಂಟ್ ಶಾಕ್ ಹೊಡೆದ ದೃಶ್ಯ ಈಗ ಸಿಸಿಟಿವಿಯಲ್ಲೂ ಸೆರೆಯಾಗಿದೆ. ತನ್ಮಯ್ ಹಾಗೂ ಧನಂಜಯ್ ಗೆ ಮತ್ತೋರ್ವ ವ್ಯಕ್ತಿ ಗಂಭೀರ ಗಾಯವಾಗಿದ್ದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದೆ.ಧನಂಜಯ್‌ಗೆ ಗಂಭೀರ ಗಾಯವಾಗಿದೆ. ವೈದ್ಯರು ಪ್ಲಾಸ್ಟಿಕ್ ಸರ್ಜರಿ ಮಾಡಬೇಕು ಎಂದಿದ್ದಾರೆ.
ಘಟನೆ ನಡೆದು ಮೂರು ದಿನದ ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ್ದ ಬೆಸ್ಕಾಂ ಸಿಬ್ಬಂದಿ, ಸಹಾಯ ಮಾಡೊ ಭರವಸೆ ಕೊಟ್ಟಿದ್ದಾರೆ.
ಆದರೆ, ಈ ಘಟನೆ ಸಂಭವಿಸೋ ಮೊದಲೇ ಕೇಬಲ್ ಚೆಕ್ ಮಾಡಿ ಲೂಸ್ ವೈಯರ್ ತೆರವು ಮಾಡಿದ್ರೆ ಅನಾಹುತ ತಪ್ಪುತ್ತಿತ್ತು.
PublicNext
24/02/2022 04:57 pm