ಬೆಂಗಳೂರು:ನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ.ಇಂದು ಸಂಜೆ ನಗರದ ಕುಮಾರಸ್ವಾಮು ಲೇಔಟ್ ನ ಮನೆಯೊಂದರಲ್ಲಿ ಘಟನೆ ನಡೆದಿದ್ದು,ಮನೆಯಲ್ಲಿ ಅಡುಗೆ ಮಾಡುವಾಗ ಅಗ್ನಿ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಪರಮೇಶ್ವರಿ ಎಂಬ ಮಹಿಳೆ ಸಾವನ್ನಪ್ಪಿದ್ದು,ಉಳಿದಂತೆ ಆರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆರು ಜನರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮನೆಯಲ್ಲಿ ತಿಥಿ ಕಾರ್ಯಾ ಇದ್ದ ಹಿನ್ನೆಲೆ ಮನೆಗೆ ಸಂಬಂಧಿಕರು ಬಂದಿದ್ರು,ಎಲ್ಲಾ ಸೇರಿ ಅಡುಗೆ ಮಾಡುವಾಗ ಅವಘಡ ಸಂಭವಿಸಿದೆ. ಗ್ಯಾಸ್ ಫ್ಲೇಮ್ ದೊಡ್ಡದಾಗಿ ಹೊತ್ತಿಕೊಂಡ ಹಿನ್ನೆಲೆ ಘಟನೆ ಅಗ್ನಿ ಹೊತ್ತಿ ಉರಿದಿದೆ.
ಸದ್ಯ ಘಟನೆಯಲ್ಲಿ ಅಕ್ಕ ಪಕ್ಕದ ಮನೆಗೆ ಯಾವುದೇ ಹಾನಿಯಾಗಿಲ್ಲ.ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಅಗ್ನಿ ನಂದಿಸಿದ್ದು, ಘಟನ ಸ್ಥಳಕ್ಕೆ ಕುದ್ದು ಸಚಿವ ಆರ್ ಅಶೋಕ್ ಭೇಟಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.
Kshetra Samachara
17/02/2022 04:19 pm