ಬೆಂಗಳೂರು: ಬೈಕ್ ಮತ್ತು ಡೀಸೆಲ್ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಐಒಸಿ ರಸ್ತೆಯ ವಾಗಟ್ ಗೇಟ್ ಬಳಿ ನಡೆದಿದೆ.
ತೀವ್ರ ಗಾಯಗೊಂಡಿರುವ ಅಪರಿಚಿತ ಬೈಕ್ ಸವಾರನನ್ನು ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ಡೀಸೆಲ್ ತುಂಬಿದ ಟ್ಯಾಂಕರ್ ಲಾರಿ ಪಲ್ಟಿಯಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಯಾವುದೇ ಅವಘಡ ಸಂಭವಿಸದಂತೆ ಮುಂಜಾಗ್ರತೆ ವಹಿಸಿದರು. ಪಲ್ಟಿಯಾದ ಟ್ಯಾಂಕರ್ ಲಾರಿಯನ್ನು ಕ್ರೇನ್ ಮೂಲಕ ನಿಲ್ಲಿಸಲಾಯಿತು. ಟ್ಯಾಂಕರ್ ನಲ್ಲಿದ್ದ ಡೀಸೆಲ್ ಎಲ್ಲವೂ ಸೋರಿಕೆಯಾಗಿ ರಸ್ತೆ ಪಾಲಾಗಿದೆ.
PublicNext
22/01/2022 03:20 pm