ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: Death Spot ಆಗ್ತಿದೆಯಾ? NH7ರ ವಿದ್ಯಾಶಿಲ್ಪಾ ಫ್ಲೈಓವರ್ Down Ramp!

ಯಲಹಂಕ: ಒಂದೇ ದಿನ ಎರಡು ಅಪಘಾತ, ಇಬ್ಬರ ಸಾವು, ಒಂದೇ ಸ್ಥಳ! ಅದು ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ರಾ.ಹೆ. 7ಕ್ಕೆ ಹೊಂದಿಕೊಂಡ ವಿದ್ಯಾಶಿಲ್ಪ ಫ್ಲೈ ಓವರ್ ಡೌನ್ರಾಂಪ್.

ಹೌದು, ಇಂದು ಮಧ್ಯಾಹ್ನ ಸಂಭವಿಸಿದ ಕಾರು ಅಪಘಾತದಲ್ಲಿ ಸುಮಾರು 45ರ ಹರೆಯದ ಭಿಕ್ಷುಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಂಗಳೂರಿನಿಂದ ದೇವನಹಳ್ಳಿ ಕಡೆಗೆ ಸ್ಕಾರ್ಪಿಯೋ ಕಾರು ತೆರಳುತ್ತಿತ್ತು. ಈ ವೇಳೆ ರಸ್ತೆ ದಾಟಲು ಓಡಿ ಬಂದ ಭಿಕ್ಷುಕನಿಗೆ ಕಾರು ಡಿಕ್ಕಿ ಹೊಡೆದಿದೆ.

ಯಲಹಂಕ ಏರ್ ಫೋರ್ಸ್ ಅಧಿಕಾರಿ ಸ್ಕಾರ್ಪಿಯೋ ಓಡಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಯಲಹಂಕ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನು, ಇಂದು ರಾತ್ರಿ 8.15ಕ್ಕೆ ಸೇಮ್ ಟು ಸೇಮ್ ಇದೇ ಸ್ಥಳದಲ್ಲಿ ರಸ್ತೆ ದಾಟಲು ಸುಮಾರು 30ರ ಹರೆಯದ ಮಹಿಳೆ ಪ್ರಯತ್ನಿಸಿದ್ದಾರೆ. ಮತ್ತದೇ ಬೆಂಗಳೂರಿನಿಂದ ‌ದೇವನಹಳ್ಳಿ ಕಡೆಗೆ ತೆರಳುತ್ತಿದ್ದ ಬೈಕ್ ಮಹಿಳೆಗೆ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರ ಗಾಯವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಂದೇ ಸ್ಥಳದಲ್ಲಿ ಎರಡು ಅಪಘಾತಗಳಾಗಿ ಇಬ್ಬರು ಪ್ರಾಣ ಬಿಟ್ಟಿರುವುದು ದುರಂತ.

Edited By : Shivu K
Kshetra Samachara

Kshetra Samachara

12/01/2022 09:08 am

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ