ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸ್ಫೋಟ : ತಪ್ಪಿದ ದುರಂತ

ಬೆಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದೆ. ದೊಡ್ಡ ಸಿಲಿಂಡರ್ ನಿಂದ ಸಣ್ಣ ಸಿಲಿಂಡರ್ ಗೆ ರೀಫಿಲ್ ಮಾಡುವಾಗ ಸ್ಫೋಟವಾಗಿರೋ ಘಟನೆ ನಗರ ಮೂಡಲಪಾಳ್ಯದಲ್ಲಿ ನಡೆದಿದೆ. ಗ್ಯಾಸ್ ಲೀಕ್ ಆಗುತ್ತಿದ್ದಂತೆ ಧಗ ಧಗ ಹೊತ್ತಿ ಉರಿದ ಬೆಂಕಿಗೆ ಇಬ್ಬರು ಮೂವರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿವೆ.

ಗೋದಾಮಿನಲ್ಲಿ 100 ಕ್ಕೂ ಹೆಚ್ಚು ಸಿಲಿಂಡರ್ ಶೇಖರಣೆ ಮಾಡಿದ್ದು ಒಂದರ ಹಿಂದೊಂದು ಸಿಲಿಂಡರ್ ಬ್ಲಾಸ್ಟ್ ಆಗಿದ್ರೆ ಅಪಾರ ಸಾವು ನೋವಾಗುತ್ತಿತ್ತು ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.

ವಸತಿಗೃಹಗಳ ಬಳಿ ಸಿಲಿಂಡರ್ ಶೇಖರಿಸುವಂತಿಲ್ಲ ಎಂದಾದರೂ ಬೆಟ್ಟಯ್ಯ ಆ್ಯಂಡ ಫ್ಯಾಮಿಲಿ ಈ ರೀಫಿಲಿಂಗ್ ದಂಧೆ ನಡೆಯುತ್ತಿತ್ತು. ಸದ್ಯ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದೆ. ಸದ್ಯ ಬೆಟ್ಟಯ್ಯ ತಲೆಮರೆಸಿಕೊಂಡಿದ್ದ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇತ್ತ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Edited By : Nagesh Gaonkar
PublicNext

PublicNext

08/01/2022 01:58 pm

Cinque Terre

37.84 K

Cinque Terre

2

ಸಂಬಂಧಿತ ಸುದ್ದಿ