ನೆಲಮಂಗಲ : ಇಂದು ಬೆಳಿಗ್ಗೆ ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.ಈ ಅಪಘಾತದಲ್ಲಿ ಇಚ್ಚರ್ ವಾಹನ ಚಾಲಕ ದುರ್ಗಪ್ಪ ಕಾಲಿಗೆ ಗಂಭಿರಗಾಯವಾಗಿದೆ. ಪಶ್ಚಿಮ ಬಂಗಾಳದ ರಾಧಿಕಾ ಗಂಭೀರ ಗಾಯವಾಗಿದೆ. ಯಲ್ಲಾಪುರದ ಮೂಕಾಂಬಿಕಾ, ಜಾರ್ಖಂಡ್ ಮೂಲದ ಶಿವನಾಥ್ ಮಾಥುರ್ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸದ್ಯ ಗಾಯಾಳುಗಳಿಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಅಪಘಾತದಲ್ಲಿ ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಚಾಲಕ ಶ್ರೀಶೈಲಾ ಎಂಬುವವರ ಕಾಲು ಮುರಿದಿದೆ.ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಿಹಾರ್ ಮೂಲದ ಅಭಿಷೇಕ್, ಪತ್ನಿ ಸೋನಾಕ್ಷಿ, ಕಾರವಾರ ಮೂಲದ ರಘುನಾಥ್ ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು 9 ಜನ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
Kshetra Samachara
30/12/2021 12:12 pm