ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಮದ್ಯ ಸೇವಿಸಿ ಕೆರೆಯಲ್ಲಿ ಈಜಲು ಹೋದವ ನೀರುಪಾಲು

ದೇವನಹಳ್ಳಿ:  ವೈನ್  ಶಾಪ್  ಪಕ್ಕದಲ್ಲಿಯೇ ಕೆರೆ ಇದ್ದು, ಮದ್ಯ ಸೇವನೆ ಮಾಡಿದ ವ್ಯಕ್ತಿ ಕುಡಿದ ನಶೆಯಲ್ಲಿ ಈಜಲು ಹೋಗಿ ಕೆರೆಯಲ್ಲಿ  ಮುಳುಗಿ ಸಾವನ್ನಪ್ಪಿದ್ದಾನೆ. ಶವ ಪತ್ತೆಗಾಗಿ  ಅಗ್ನಿಶಾಮಕ ದಳ  ಸಿಬ್ಬಂದಿ  ಹುಡುಕಾಟ ನಡೆಸಿದ್ದಾರೆ.

ದೇವನಹಳ್ಳಿ ತಾಲೂಕಿನ  ಬೂದಿಗೆರೆ  ಗ್ರಾಮದ ಕೆರೆಯಲ್ಲಿ ಇಂದು ಘಟನೆ ನಡೆದಿದ್ದು, ಕೇಶವ ( 36) ಮೃತಪಟ್ಟವರು. ಕೆರೆಯ ಪಕ್ಕದಲ್ಲಿಯೇ ವೈನ್ ಶಾಪ್ ಇದ್ದು, ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ತುಂಬಿತ್ತು. ಮದ್ಯ ಸೇವಿಸಿದ ಬಳಿಕ ಕೇಶವ ನಶೆಯಲ್ಲಿಯೇ ಈಜಲು ಕೆರೆಗೆ ಇಳಿದಿದ್ದ.

ಕೆರೆ ಬಳಿ ವೈನ್ ಶಾಪ್ ಗೆ ಅವಕಾಶ ನೀಡಿರುವುದೇ ಅವಘಡಕ್ಕೆ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಶವ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಕತ್ತಲಾದ ಕಾರಣ ಕಾರ್ಯಾಚರಣೆ ನಿಲ್ಲಿಸಿದ್ದು, ನಾಳೆ ಬೆಳಗ್ಗೆ ಶವ ಪತ್ತೆ ಕಾರ್ಯಾಚರಣೆ ಮುಂದುವರಿಯಲಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Nirmala Aralikatti
Kshetra Samachara

Kshetra Samachara

24/11/2021 08:06 pm

Cinque Terre

472

Cinque Terre

0

ಸಂಬಂಧಿತ ಸುದ್ದಿ