ಬೆಂಗಳೂರು: ವಿಧಾನ ಸೌಧದ ಮುಂದೇನೆ ಇವತ್ತು ಕಾರು ಅಪಘಾತವಾಗಿದೆ. ತೆಲೆ ಸುತ್ತು ಬಂದು ಕಾರ್ ಚಾಲಕ ಡಿವೈಡರ್‌ಗುದ್ದಿದ್ದಾನೆ. ಅದೃಷ್ಟವಶಾತ್ ಕಾರ್ ನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿ ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಧಾನ ಸೌಧದ ಮುಂದೆ ಸಂಭವಿಸಿದ ಕಾರು ಅಪಘಾತದಿಂದ ಕಾರು ಸಂಪೂರ್ಣ ಜಖಂ ಆಗಿದೆ. ಕಾರು ಗುದ್ದಿದ ರಭಸಕ್ಕೆ
ಡಿವೈಡರ್ ಡ್ಯಾಮೇಜ್ ಆಗಿದೆ. ಸ್ಥಳಕ್ಕೆ ಕಬ್ಬನ್ ಪಾರ್‌ಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Kshetra Samachara
22/11/2021 05:53 pm