ಬೆಂಗಳೂರು: ಆಕಸ್ಮಿಕ ಬೆಂಕಿಯಿಂದ ಕಾರು ಭಸ್ಮ ಪ್ರಕರಣದಲ್ಲಿ ಮೊದಲು ಮನೆಯಲ್ಲಿದ್ದ UPS ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಜ್ವಾಲೆಗಳು ಇಡೀ ಮನೆಯನ್ನೇ ಆವರಿಸಿದೆ. ಬಳಿಕ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹೊತ್ತಿಕೊಂಡಿದೆ. ಕಾರಿಗೆ ಬೆಂಕಿ ಹೊತ್ತಿದ ಬಳಿಕ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದಿಂದ ಮೂವರು ಸಿಬ್ಬಂದಿಗೆ ಗಾಯಗಳಾಗಿವೆ
ಬುಧವಾರ ತಡರಾತ್ರಿ ಮನೆಯ ಗೇಟ್ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ಸ್ಫೋಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್ ಸಂಭವಿಸಿದೆ. ಬೆಂಕಿ ನಂದಿಸುತ್ತಿದ್ದ ಮೂವರು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ.
ಮೂವರು ಅಗ್ನಿಶಾಮಕ ಸಿಬ್ಬಂದಿಗೆ ಗಾಯಗಳಾಗಿವೆ. ಬೆಂಕಿಯಿಂದ ಒಂದು ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ. ಕಿಶೋರ್ ಎಂಬುವರಿಗೆ ಸೇರಿದ ಮನೆ ಮತ್ತು ಕಾರು ಇದಾಗಿದೆ. ಹರೀಶ್, ರಾಜಶೇಖರ್ ಮತ್ತು ಮುತ್ತಪ್ಪ ಗಾಯಗೊಂಡಿರುವ ಅಗ್ನಿಶಾಮಕ ಸಿಬ್ಬಂದಿಯಾಗಿದ್ದಾರೆ
Kshetra Samachara
18/11/2021 03:12 pm