ಬೆಂಗಳೂರು:ಫ್ಲೈ ಓವರ್ ಮೇಲೆ ಯುವಕರು ಸೆಲ್ಫಿ ತೆಗೆದುಕೊಳ್ಳಿತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರು ಬಲಿಯಾಗಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ತಾವರಕೆರೆ ಫ್ಲೈ ಓವರ್ ಮೇಲೆ ರಾತ್ರಿ 1 ಗಂಟೆಗೆ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ 1 ಗಂಟೆಗೆ ನಡೆದ ಈ ಘಟನೆಯಲ್ಲಿ ದಿನೇಶ್(25), ವಿನಯ್ (25) ಮೃತ ಪಟ್ಟಿದ್ದಾರೆ.ಅಂಕಿತ್ ಸ್ಥಿತಿ ಚಿಂತಾಜನಕವಾಗಿಯೇ ಇದೆ. ಜೊತೆಗೇನೆ ಇದ್ದ ಜನಾರ್ಧನ್ ಮತ್ತು ಜಾಸ್ಮಿನ್ ಅನ್ನೋರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬೆಂಗಳೂರು ವೈಟ್ ಫೀಲ್ಡ್ ನಿವಾಸಿಗಳಾಗಿದ್ದಾರೆ. ಗಾಯಾಳುಗಳನ್ನ ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Kshetra Samachara
12/11/2021 06:14 pm