ದೊಡ್ಡಬಳ್ಳಾಪುರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಭಕ್ತರ ಹುಂಡಿ ಹಣ ಎಣಿಕೆ ಮಾಡಲಾಗಿದ್ದು. 7 ಲಕ್ಷ ಕಡಿಮೆ ಒಂದು ಕೋಟಿ ಸಂಗ್ರಹವಾಗಿದೆ.
ನಾಗರಾಧನೆಯ ಕ್ಷೇತ್ರವಾಗಿರುವ ಘಾಟಿ ಸುಬ್ರಮಣ್ಯಕ್ಕೆ ಸರ್ಪ ದೋಷ ನಿವಾರಣೆಗಾಗಿ ಸಾವಿರಾರು ಭಕ್ತರು ಭೇಟಿ ನೀಡುವರು, ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ಕಾಣಿಕೆ ರೂಪದಲ್ಲಿ ಹುಂಡಿಗೆ ಹಣ ಹಾಕುವರು, ಕಳೆದ ಸೆಪ್ಟೆಂಬರ್ 5 ರಂದು ಹುಂಡಿ ಹಣ ಎಣಿಕೆ ಮಾಡಿದಾಗ 69,04,308 ರೂಪಾಯಿ ಸಂಗ್ರಹವಾಗಿತ್ತು, ಹುಂಡಿ ಎಣಿಕೆ ಸಮಯದಲ್ಲಿ ಮಳೆ ಬಂದ ಹಿನ್ನಲೆ ಎರಡು ಹುಂಡಿಗಳ ಎಣಿಕೆ ಕಾರ್ಯ ಮಾಡಲಾಗಿತ್ತು.
ಎಣಿಕೆ ಮಾಡಲಾಗದೆ ಇದ್ದ ಮೂರು ಹುಂಡಿಗಳನ್ನ ಇಂದು ಎಣಿಕೆ ಮಾಡಲಾಗಿದ್ದು 24, 03, 735 ರೂಪಾಯಿ ಸಂಗ್ರಹವಾಗಿದೆ, ಒಟ್ಟು 93, 08, 043 ರೂಪಾಯಿ ಸಂಗ್ರಹವಾಗಿದೆ.
PublicNext
12/09/2022 06:02 pm