ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಒಂದು ದಿನ ಕ್ರೀಡಾ ಇಲಾಖೆ ಅಧಿಕಾರಿಯಾದ ಮಲ್ಲಮ್ಮ

ಬಾಗಲಕೋಟೆ: ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಒಂದು ದಿನದ ಅನುಭವವನ್ನು ತಾಲೂಕಿನ ಹಳ್ಳೂರ ಗ್ರಾಮದ ಮಲ್ಲಮ್ಮ ಪರನಗೌಡರ ಪಡೆದುಕೊಂಡರು.

ಮಂಗಳವಾರ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಜೊತೆ ಒಂದು ದಿನ ಇದ್ದು, ಕಾರ್ಯನಿರ್ವ ಹಣೆ ಅನುಭವ ಪಡೆದುಕೊಂಡರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಗೂಡನವರ ಅಧಿಕಾರದ ಕಾರ್ಯನಿರ್ವಹಣೆ ಅನುಭವ ಪಡೆಯಲು ಅವಕಾಶ ಮಾಡಿಕೊಟ್ಟಿದ್ದರು. ಅದಕ್ಕೆ ಮಲ್ಲಮ್ಮ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಲ್ಲಮ್ಮಳಿಗೆ ಅಧಿಕಾರದ ಕಾರ್ಯನಿರ್ವಹಣೆಯ ಅನುಭವ ಪಡೆದಿದ್ದಕ್ಕೆ ಪ್ರಮಾಣ ಪತ್ರ ನೀಡಲಾಯಿತು.

Edited By : Nagaraj Tulugeri
Kshetra Samachara

Kshetra Samachara

11/10/2022 06:58 pm

Cinque Terre

10.08 K

Cinque Terre

0