ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಅ.18ರಿಂದ ಮೂರು ದಿನ ಅಖಿಲ ಭಾರತ ಅಗ್ರಿ ಸ್ಟಾಟ್೯ ಅಪ್-2022 ಸಮಾವೇಶ

ಬಾಗಲಕೋಟೆ: ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಕ್ಟೋಬರ್‌ 18 ರಿಂದ ಮೂರು ದಿನಗಳ ಕಾಲ ಅಖಿಲ ಭಾರತ ಅಗ್ರಿ ಸ್ಟಾಟ್೯ ಅಪ್ -2022 ಸಮಾವೇಶ ಆಯೋಜಿಸಿದೆ. ತೋಟಗಾರಿಕಾ ವಿವಿ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿ ಕುಲಪತಿ ಡಾ.ಕೆ.ಎಂ ಇಂದಿರೇಶ್ ಹೇಳಿದರು.

ಭಾರತದ ಕೃಷಿ ಕ್ಷೇತ್ರದಲ್ಲಿ ಸ್ಟಾಟ್೯ ಅಪ್‌ಗಳು ತುಂಬಾ ಕಡಿಮೆ , ಅಲ್ಲದೆ ಪ್ರಸ್ತುತದಲ್ಲಿರುವ ಈ ಅಗ್ರಿ ಸ್ಟಾರ್ಟ್ ಅಪ್‌ಗಳು ಕೃಷಿಯೇತರ ವೃತ್ತಿಪರರಿಂದ ಪ್ರಾಬಲ್ಯ ಹೊಂದಿವೆ. ಕೃಷಿ ಅಥವಾ ತೋಟಗಾರಿಕಾ ಪಡೆದರು ಕೃಷಿ - ಸ್ಪಾರ್ಟ್-ಅಪ್‌ಗಳಲ್ಲಿ ತೊಡಗಿಸಿಕೊಳ್ಳುವುದು ಇಲ್ಲವೆ ವಾಣಿಜ್ಯೋದ್ಯಮ ಹೊಂದಿರುವುದು ತುಂಬಾ ಕಡಿಮೆ.

ಈ ಸಮಾವೇಶವು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಉದ್ಯೋಗಾವಕಾಶ ಮತ್ತು ಸವಾಲುಗಳನ್ನು ಸ್ವೀಕರಿಸುವುದರಿಂದ ಉದ್ಯಮಶೀಲತೆಯನ್ನು ತೆಗೆದುಕೊಳ್ಳುವ ಕಡೆಗೆ ಅವರನ್ನು ಪ್ರೇರೇಪಿಸುವಂತಹ ಚಟುವಟಿಕೆಗಳನ್ನು ಮಾಡುವ ಗುರಿಯನ್ನು ಹೊಂದಿದೆ ಎಂದರು.

ಹೊಸತನವನ್ನು ಉತ್ತೇಜಿಸುವಲ್ಲಿ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯು ಪ್ರಮುಖ ಪಾತ್ರವಹಿಸುತ್ತೆ. ಅಗ್ರಿ ಸಾರ್ಟ್-ಅಪ್‌ಗಳು ಹವಾಮಾನ ಮುನ್ಸೂಚನೆ ಮಾಹಿತಿ , ಡ್ರೋನ್ ಬಳಕೆ , ಪರಿಕರಗಳ ಚಿಲ್ಲರೆ ವ್ಯಾಪಾರ ಮತ್ತು ಸಲಕರಣೆ ಬಾಡಿಗೆ, ಹಣ್ಣುಗಳು ಮತ್ತು ತರಕಾರಿಗಳ ಮಾರಾಟ ಮಾಡುವುದು, ಆನ್‌ಲೈನ್ ಮತ್ತು ಫಾರ್ಮ್ ಆಟೊಮೇಷನ್‌ನಿಂದ ಸಂರಕ್ಷಿತ ಕೃಷಿ , ಮೌಲ್ಯಮಾಪನ, ಶ್ರೇಣೀಕರಣದವರೆಗೆ ಹಲವಾರು ವಿಭಾಗಗಳಲ್ಲಿ ಬರುವ ಅವಕಾಶ ಹೊಂದಿದೆ .

ಈ ಸಮಾವೇಶವು ಎಲ್ಲಾ ಮಧ್ಯಸ್ಥಗಾರರನ್ನು ಉದಯೋನ್ಮುಖ ಕೃಷಿಕರು , ಕೈಗಾರಿಕೋದ್ಯಮಿಗಳು , ರೈತರು, ಸಂಶೋಧನಾ ಸಂಸ್ಥೆಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ ಎಂದರು.

Edited By : Nagesh Gaonkar
PublicNext

PublicNext

11/10/2022 03:14 pm

Cinque Terre

19.53 K

Cinque Terre

0