ಬಾಗಲಕೋಟೆ: ನಗರದ ವಿದ್ಯಾಗಿರಿಯಲ್ಲಿ ನಾಳೆ ಆರೆಸ್ಸೆಸ್ ಪಥ ಸಂಚಲನ ನಡೆಯಲಿದೆ. ಪಥ ಸಂಚಲನ ಹಿನ್ನೆಲೆಯಲ್ಲಿ ಅದ್ದೂರಿ ಸಿದ್ಧತೆಗಳು ನಡೆಯುತ್ತಿವೆ. ಪಥ ಸಂಚಲನ ಮಾರ್ಗದುದ್ದಕ್ಕೂ ಮಹಾದ್ವಾರಗಳ ನಿರ್ಮಾಣ, ಕಟೌಟ್, ಬ್ಯಾನರ್ ಗಳ ಅಳವಡಿಕೆ ಕಾರ್ಯ ಜೋರಾಗಿದೆ. ಕೇಸರಿ ಮಹಾದ್ಚಾರ, ಕೇಸರಿ ಧ್ವಜಗಳ ಅಳಡಿಕೆಯಿಂದ ಇಡೀ ವಿದ್ಯಾಗಿರಿಯ ಸಂಪೂರ್ಣ ವಿದ್ಯಾಗಿರಿ ಕೇಸರಿಮಯವಾಗಿದೆ.
ನಾಳೆ ಮಧ್ಯಾಹ್ನ ನಡೆಯುವ ಆರೆಸ್ಸೆಸ್ ಪಥ ಸಂಚಲನದಲ್ಲಿ 500 ಕ್ಕೂ ಅಧಿಕ ಬಾಲ ಘನ ವೇಷಧಾರಿಗಳು ಭಾಗವಹಿಸಲಿದ್ದಾರೆ. ಜತೆಗೆ ಸಾವಿರಾರು ಜನರು ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
Kshetra Samachara
01/10/2022 03:00 pm