ಬಾಗಲಕೋಟೆ: ನಾಡದೋರೆ ಮನೆಗೂ ಹಲಕುರ್ಕಿ ಗ್ರಾಮಸ್ಥರ ಭೂಸ್ವಾಧೀನ ವಿರೋಧಿ ಹೋರಾಟ ತಲುಪಿದೆ. ಕಳೆದ 11 ದಿನಗಳಿಂದ ಹಲಕುರ್ಕಿ ಗ್ರಾಮಸ್ಥರು ಕೈಗಾರಿಕೆ ಉದ್ದೇಶಕ್ಕೆ ಭೂಸ್ವಾಧೀನ ವಿರೋಧಿಸಿ, ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಸೇರಿದಂತೆ ನಾನಾ ಸಂಘಟನೆಗಳು ಒತ್ತಾಯದ ಭೂಸ್ವಾಧೀನ ವಿರೋಧಿಸಿ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಕುರಿ, ಆಡು, ಜಾನುವಾರು ಸಮೇತ ಹೋರಾಟ ನಡೆಸಿದ್ದಾರೆ. ಅಷ್ಟೆ ಅಲ್ಲ, ಸೋಮವಾರ ಜಾನುವಾರು ಸಮೇತ ಬಾದಾಮಿ ತಹಸೀಲ್ದಾರ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಏತನ್ಮಧ್ಯೆ ಇಂದು ಹೋರಾಟಗಾರರು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಹೋರಾಟದ ವಾಸ್ತವ ಸ್ಥಿತಿ ವಿವರಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳು ಹೋರಾಟಗಾರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. " ಹೋರಾಟದ ಮಾಹಿತಿ ಗಮನಕ್ಕೆ ಬಂದದೆ. ರೈತರಿಗೆ ಅನ್ಯಾಯ ಆಗದಂತೆ" ಕ್ರಮ ವಹಿಸುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಭರವಸೆ ಮಾತ್ರ ಹೋರಾಟ ನಿಲ್ಲದು, ಭೂಸ್ಚಾಧೀನ ಕ್ರಮ ಕೈ ಬಿಡಲಾಗಿದೆ ಎನ್ನುವ ಆದೇಶ ಸರ್ಕಾರದಿಂದ ಅಧಿಕೃತವಾಗ ಹೊರಬೀಳುವವರೆಗೂ ಮುಂದುವರಿಯಲಿದೆ ಎಂದು ಮುಂಚೂಣಿ ಹೋರಾಗಾರ ಪ್ರಕಾಶ ನಾಯ್ಕರ ತಿಳಿಸಿದ್ದಾರೆ.
ಹೋರಾಟ ಆರಂಭಗೊಂಡು 11 ದಿನ ಕಳೆದಿವೆ. ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮಾತ್ರ ತಮ್ಮದೇ ಕ್ಷೇತ್ರದ ಗ್ರಾಮಕ್ಕೆ ತೆರಳಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಕೆಲಸ ಮಾಡುತ್ತಿಲ್ಲ. ಆದರೆ ಒತ್ತಾಯದಿಂದ ಭೂಸ್ಚಾಧೀನ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿ ಸುಮ್ಮನಾಗಿದ್ದಾರೆ. ಒತ್ತಾಯದ ಭೂಸ್ವಾಧೀನ ಇಲ್ಲ ಎನ್ನುವ ಸಚಿವರ ಹೇಳಿಕೆ ಸ್ವಾಗತಿಸಿರುವ ಕಾಂಗ್ರೆಸ್ಸಿಗರು, ರೈತರ ಮನವೊಲಿಸಲು ತಾವು ಬರಲು ಸಿದ್ಧ ಎನ್ನುವ ಮಾತನ್ನು ಹೇಳುವ ಮೂಲಕ, ಭೂಸ್ವಾಧೀನಕ್ಕೆ ತಮ್ಮ ವಿರೋಧವಿಲ್ಲ. ಆದರೆ ಒತ್ತಾಯದ ಭೂ ಸ್ವಾಧೀನ ಬೇಡ ಎನ್ನುತ್ತಿದ್ದಾರೆ.
ವಿಷಯ ಮುಖ್ಯಮಂತ್ರಿಗಳ ತಲುಪಿದರೂ ಕೈಗಾರಿಕೆ ಸಚಿವರು ಮಾತ್ರ ಈ ವಿಷಯದಲ್ಲಿ ಹಠಮಾರಿ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವುದು ಎಲ್ಲರನ್ನೂ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಹಲಕುರ್ಕಿ ಗ್ರಾಮದ ಶೇ.75 ರಷ್ಟು ರೈತರು ಭೂಮಿ ಬಿಟ್ಟುಕೊಡಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳುತ್ತಿರುವ ಸಚಿವರು ಒಮ್ಮೆ ಗ್ರಾಮಕ್ಕೆ ತೆರಳಿ ರೈತರೊಂದಿಗೆ ಮಾತುಕತೆ ನಡೆಸಿದಲ್ಲಿ ಪರಿಸ್ಥಿತಿ ತಿಳಿಗೊಳ್ಳಲಿದೆ. ಆ ಕೆಲಸಕ್ಕೆ ಏಕೆ ಮುಂದಾಗುತ್ತಿಲ್ಲ ಎನ್ನುವ ಜತೆಗೆ ಹತ್ರಾರು ಅನುಮಾನಗಳು ಜನಮಾನಸದಲ್ಲಿ ಸೃಷ್ಟಿ ಆಗುತ್ತಿವೆ.
PublicNext
30/09/2022 07:59 pm