ಬಾಗಲಕೋಟೆ : ಪಿಎಫ್ ಐ ಸಂಘಟನೆ ನಿಷೇಧಿಸುವಂತೆ ಕಾಂಗ್ರೆಸ್ಸಿಗರೆ ಸದನದ ಒಳಗೆ, ಹೊರಗೆ ಒತ್ತಾಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಬಹು ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಂಡಿದೆ.
ನಿಷೇಧಿತ ಪಿಎಫ್ ಐ ಸಂಘಟನೆಯೊಂದಿಗೆ ದೇಶಭಕ್ತ ಆರೆಸ್ಸೆಸ್ ನದನು ಹೋಲಿಕೆ ಮಾಡುವುದು ಅಕ್ಷಮ್ಯ. ಆರೆಸ್ಸೆಸ್ ನಿಷೇಧ ಬಗ್ಗೆ ಮಾತನಾಡುವುದು ಮುರ್ಖತನ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಪಿಎಫ್ಐ ನಿಷೇಧ ಬಗೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವ್ಯಾಖ್ಯಾನಗಳಾಗಿವೆ.
ಆ ಬಗ್ಗೆ ಮಾತನಾಡುವುದು ಏನಿಲ್ಲ. ಆರ್ ಎಸ್ ಎಸ್ ದೇಶಭಕ್ತ ಸಂಘಟನೆ ಆಗಿದೆ. ರಾಜಕೀಯ ತುಷ್ಟೀಕರಣಕ್ಕಾಗಿ ಕೆಲವರು ಮಾತನಾಡುತ್ತಾರೆ.
ಮುಂದಿನ ದಿನಗಳಲ್ಲಿ ರಾಜಕೀಯಕ್ಕಾಗಿ ಇಂತಹ ಮಾತುಗಳು ಇನ್ನೂ ಹೆಚ್ಚಾಗಲಿವೆ ಎಂದರು.
PublicNext
30/09/2022 03:07 pm