ರಾಜ್ಯ ಬಿಜೆಪಿ ಸರ್ಕಾರ ಹಿಂದು ಸಂಘಟನೆ ಹಾಗೂ ಅವುಗಳ ಕಾರ್ಯಕರ್ತರನ್ನು ಮತಬ್ಯಾಂಕ್ ಆಗಿ ಮಾತ್ರ ಬಳಿಸಿಕೊಳ್ಳುತ್ತಿದೆ ಹೊರತು
ಅವರ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ಹಿಂಜಾವೇ ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಅಯ್ಯನಗೌಡರ ಗಂಭೀರ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು ರಾಜ್ಯ ಸರ್ಕಾರ ಹಿಂದುಗಳ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕಾನೂನಾತ್ಮಕ ನೆರವಿಗೂ ಬರುತ್ತಿಲ್ಲ ಎಂದರು.
ಕೆರೂರ ಘಟನೆಗೆ ಸಂಬಂಧಿಸಿದಂತೆ ಅಮಾಯಕ ಹಿಂದು ಕಾರ್ಯಕರ್ತರನ್ನು ಬಂಧಿಸಿ, ಪೊಲೀಸರು ಚಿತ್ರಹಿಂಸೆ ನೀಡಿದರೂ ಸರ್ಕಾರ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಬಾದಾಮಿ ಕ್ಷೇತ್ರದಲ್ಲಿ ಅದಾವ ಶಕ್ತಿ ಆಳ್ವಿಕೆ ನಡೆಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ ಅವರು ಸರ್ಕಾರ ಪ್ರಭಾವಿ ವ್ಯಕ್ತಿಗೆ ಪ್ರಭಾವಕ್ಕೆ ಶರಣಾಗಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು. ಅಮಾಯಕ ಹಿಂದು ಕಾರ್ಯಕರ್ತರ ಬಂಧಿಸಿ ಚಿತ್ರಹಿಂಸೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಹಿಂಜಾವೇ ಹೋರಾಟ ಮುಂದುವರಿಯಲಿದೆ. ನವರಾತ್ರಿ ಹಬ್ಬದ ಬಳಿಕ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ಅಯ್ಯನಗೌಡರ ಹೇಳಿದರು. ಕುಮಾರಸ್ವಾಮಿ ಹಿರೇಮಠ, ಅರುಣ ಕಟ್ಟಿಮನಿ, ವಜ್ಜಲ ಇದ್ದರು.
PublicNext
29/09/2022 03:43 pm