ಬಾಗಲಕೋಟೆ: ನನ್ನ ಕೆಣಕಬೇಡಿ, ನನ್ನ ಕೆಣಕಿದ ಜನಾರ್ಧನ ರೆಡ್ಡಿ ಏನಾದ್ರೂ ನೋಡಿದ್ರಾ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಶ್ರೀರಾಮುಲು, ಅದು ಅವರ ದುರಹಂಕಾರ ತೋರಿಸಿಕೊಡುತ್ತದೆ ಎಂದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು ಬೆಳಿಗ್ಗೆ ಎದ್ರೆ ಸಾಕು ಯಾರನ್ನ ಕೆಣಕಬೇಕು ಅಂತ ಅವ್ರು ಪ್ರಯತ್ನ ಮಾಡ್ತಾರೆ. ಆದರೆ ನಾವು ಕೆಣಕೋಕೆ ಹೋಗಲ್ಲ.
ಯಾಕಂದ್ರೆ ಎಲ್ಲ ವಿಚಾರಗಳನ್ನು ಅವ್ರು ಮೈಮೇಲೆ ಎಳೆದುಕೊಳ್ಳುತ್ತಾರೆ. ನಮ್ಮ ಬಳ್ಳಾರಿ ಅಂತ ಪದೆ ಪದೆ ಉಲ್ಲೇಖ ಮಾಡ್ತಾರೆ ಎಂದರು. ಮಡಿಕೇರಿಗೆ ಹೋಗುವ ಪ್ರಯತ್ನ ಮಾಡಿದ್ರು. ಅಲ್ಲಿಗೆ ಹೋಗೋದಕ್ಕೆ ಆಗಲಿಲ್ಲ, ತಾಖತ್ ಆಗ್ಲಿಲ್ಲ ಎಂದು ವ್ಯಂಗ್ಯವಾಡಿದರು.
ಗಣಿ ಹಗರಣದಲ್ಲಿ ಯಾರು ತಪ್ಪಿತಸ್ಥರು, ಯಾರು ಆರೋಪಿಗಳು ಅನ್ನೋದನ್ನ ಕೋರ್ಟ್‌ಗೆ ಬಿಟ್ಟ ವಿಚಾರ ಎಂದರು. ಮುಂದಿನ ವಿಧಾನಸಭೆ ಚುನಾವಣೆಗೆ ಜನಾರ್ದನ ರೆಡ್ಡಿ ಸ್ಪರ್ಧೆ ಬಗೆಗೆ ಮಾತನಾಡಿದ ರಾಮುಲು, ಸದ್ಯಕ್ಕೆ ಆ ಬಗ್ಗೆ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಪಾರ್ಟಿ ತೀರ್ಮಾನ ತಗೊಂಡ್ರೆ ಏನಾದ್ರೂ ಆಗಬಹುದು.ಇದರಲ್ಲಿ ನನ್ನ ಒತ್ತಡ ಏನಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
Kshetra Samachara
24/09/2022 05:36 pm