ಬಾಗಲಕೋಟೆ: ಮೈಸೂರಿನಲ್ಲಿ ಜರುಗಿದ ಅಂತರ್ ರಾಜ್ಯ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಮುಧೋಳದ ಕುಮಾರಿ ಪ್ರತಿಕ್ಷ ಭೋವಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಜಿಲ್ಲೆಯ, ರಾಜ್ಯದ ಮತ್ತು ಮುಧೋಳ್ ತಾಲೂಕಿನ ಕೀರ್ತಿಹೆಚ್ಚಿಸಿರುವ ಪತಿಕ್ಷ ಅವರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿನಂದನೆ ಸಲ್ಲಿಸಿದ್ದಾರೆ. ಮುಧೋಳದ ಹೆಮ್ಮೆಯ ಮಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ಅವರು ಜೀವನದಲ್ಲಿ ಇನ್ನೂ ಹೆಚ್ಚು ಯಶಸ್ಸು ದೊರಕಲಿ ಎಂದು ಹಾರೈಸಿದ್ದಾರೆ.
Kshetra Samachara
02/10/2022 02:07 pm