ಬಾಗಲಕೋಟೆ: ಮುಧೋಳದಲ್ಲಿಂದು ನಡೆದ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕಾಶಪ್ಪನವರ ದಂಪತಿ ಖುರ್ಚಿ ಕಿರಿಕ್ ನಡೆಯಿತು.
ವೀಣಾ ಕಾಶಪ್ಪನವರ ಸಿದ್ದರಾಮಯ್ಯ ಬಳಿ ಬಂದು ಕೂತರು. ಆಗ ಸಿದ್ದರಾಮಯ್ಯ ಬಳಿ ಬಂದು ಇಲ್ಲಿ ಕೂರಿಸಿಕೊಳ್ಳಬೇಡಿ ಎಂದು ವಿಜಯಾನಂದ ಕಾಶಪ್ಪನವರ ಸಲಹೆ ಮಾಡಿದಾಗ ಸಿದ್ದರಾಮಯ್ಯ ಹೋಗು ಬೇರೆ ಕಡೆ ಕೂರು ಎಂದು ವೀಣಾಗೆ ಸಲಹೆ ಮಾಡಿದರು.
ವೀಣಾ ಸಿದ್ದರಾಮಯ್ಯ ಬಳಿಯಿಂದ ಮೇಲೇಳುವವರೆಗೂ ಕಾಶಪ್ಪನವರ ಅಲ್ಲಿಂದ ಕದಲಲಿಲ್ಲ. ಬಳಿಕ ಬೇರೆ ಕಡೆ ತನ್ನ ಆಸನದ ಬಳಿ ಕೂರಿಸಿಕೊಂಡರು. ಒಳಗೆ ಅಸಮಾಧಾನವಿದ್ದರೂ ತೋರಿಸಿಕೊಳ್ಳದೆ ಇಬ್ಬರೂ ಪರಿಸ್ಥಿತಿ ಮ್ಯಾನೇಜ್ ಮಾಡಿದರು.
PublicNext
27/09/2022 07:08 pm