ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಬ್ಬಗಳು ಸಹಬಾಳ್ವೆಗೆ ಸಹಕಾರಿ; ಮಾವಿನಮರದ

ಬಾಗಲಕೋಟೆ: ಹಬ್ಬಗಳು ಸಮುದಾಯದ ಸಹಬಾಳ್ವೆಗೆ ಸಹಕಾರಿ ಆಗಿವೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಣಮಂತ ಮಾವಿನಮರದ ಹೇಳಿದರು.ಗುಳೇದಗುಡ್ಡ ತಾಲೂಕು ಲಾಯದಗುಂದಿ ಗ್ರಾಮದಲ್ಲಿ ದಸರಾ ಹಾಗೂ ವಿಜಯದಶಮಿ ಹಬ್ಬದ ಪ್ರಯುಕ್ತವಾಗಿ ಡಾ.ಬಾಬು ಜಗಜೀವನರಾಮ್ ಯುವಕ ಸಂಘ ಹಮ್ಮಿಕೊಂಡಿದ್ದ ಜಿದ್ದಾಜಿದ್ದಿನ ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ ಹೆಚ್ಚಿಸಿ ಸಮಾನತೆ ಮತ್ತು ಸಹೋದರತ್ವದ ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಿ ವೈಚಾರಿಕ ಜೀವನದಡೆಗೆ ಕೊಂಡೊಯ್ಯುವ ಶಕ್ತಿ ಜಾನಪದ ಪರಂಪರೆಗಿದೆ ಎಂದರು.ಇತ್ತೀಚೆಗೆ ಭಾರತೀಯರಲ್ಲಿ ಹೆಚ್ಚುತ್ತಿರುವ ಪಾಶ್ಚಾತ್ಯ ಕಲೆಗಳ ಆಕರ್ಷಣೆಯಿಂದ ಹಾಗೂ ಆಧುನಿಕ ಮಾಧ್ಯಮ ಗಳ ಪ್ರಭಾವದಿಂದಾಗಿ 30 ಸಾವಿರಕ್ಕೂ ಅಧಿಕ ಕಲೆಗಳನ್ನು ಹೊಂದಿರುವ ಜನಪದ ಸಂಸ್ಕೃತಿ ಇಂದು ಅವನತಿಯ ಅಂಚಿಗೆ ಬಂದು ತಪಲುಪಿದೆ. ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಲು ಸರಕಾರ ಜಾನಪದೀಯ ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್, ಸೇರಿದಂತೆ ಗ್ರಾಮದ ಮುಖಂಡರು, ಕಾರ್ಯಕರ್ತರು ಇತರರು ಇದ್ದರು.

Edited By : Nirmala Aralikatti
Kshetra Samachara

Kshetra Samachara

05/10/2022 12:33 pm

Cinque Terre

1.82 K

Cinque Terre

0

ಸಂಬಂಧಿತ ಸುದ್ದಿ