", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/412788_1735641987_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen rabakavi" }, "editor": { "@type": "Person", "name": "9342210542" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಬಕವಿ-ಬನಹಟ್ಟಿ: ಪೊಲೀಸ್ ಸಿಬ್ಬಂದಿಗೆ ಕೊಡಮಾಡಿದ ಹೆಲ್ಮೆಟ್ ಗಳನ್ನು ಕಡ್ಡಾಯವಾಗಿ ಬಳಸಬೇಕು. ಇಲ್ಲದಿದ್ದರೇ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿ...Read more" } ", "keywords": "Rabkavi-Banahatti, Road Safety, Helmet Awareness, DSP Shantaveer, Karnataka Police, Two-Wheeler Safety ,,Bagalkot,Law-and-Order", "url": "https://publicnext.com/article/nid/Bagalkot/Law-and-Order" }
ರಬಕವಿ-ಬನಹಟ್ಟಿ: ಪೊಲೀಸ್ ಸಿಬ್ಬಂದಿಗೆ ಕೊಡಮಾಡಿದ ಹೆಲ್ಮೆಟ್ ಗಳನ್ನು ಕಡ್ಡಾಯವಾಗಿ ಬಳಸಬೇಕು. ಇಲ್ಲದಿದ್ದರೇ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಜಮಖಂಡಿ ಡಿವೈಎಸ್ಪಿ ಈ. ಶಾಂತವೀರ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆಯನ್ನುದ್ದೇಶಿಸಿ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಹೊಸ ವರ್ಷದ ಸಂದರ್ಭದಲ್ಲಿ ಎಪಿಕೆ ಆಧಾರಿತ ಶುಭಾಶಯ ಪೈಲ್‌ಗಳು ವಾಟ್ಸಪ್ ನಲ್ಲಿ ಬಂದರೇ ಕ್ಲಿಕ್ ಮಾಡಬೇಡಿ. ಕ್ಲಿಕ್ ಮಾಡಿದರೇ ಒಂದು ಘಂಟೆಯೊಳಗೆ 1930 ನಂಬರಗೆ ತಕ್ಷಣ ಕರೆ ಮಾಡಬೇಕು. ಡಿಸೆಂಬರ್ ತಿಂಗಳಲ್ಲಿ ಬಂದೊಬಸ್ತ್ ಕಾರ್ಯಗಳು ಕಡಿಮೆ ಇರುವುದರಿಂದ ಮತ್ತು ಅಪಘಾತಗಳಂತಹ ಪ್ರಕರಣಗಳು ಹೆಚ್ಚಾಗುವ ಕಾರಣ ಮಾಸಾಚರಣೆ ಜಾಗೃತಿ ಮಾಡಲಾಗುವುದು. ನನ್ನ ಲೇಖನಕ್ಕಾಗಿ ಸಂಗ್ರಹಿಸಲಾದ ಮಾಹಿತಿ ಪ್ರಕಾರ ದೇಶದಲ್ಲಿ ವಾರ್ಷಿಕ ಅಂದಾಜು 1.50ಲಕ್ಷದಷ್ಟು ಅಪಘಾತದಲ್ಲಿ ಸಾವು ಪ್ರಕರಣ ನಡೆಯುತ್ತವೆ. ಅದರಲ್ಲಿ ಶೇ.60ರಷ್ಟು ಜನರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದಕಾರಣ ದಯವಿಟ್ಟು ಬೈಕ್ ಹತ್ತಬೇಕಾದರೇ ಹೆಲ್ಮೆಟ್ ಹಾಕಿ, ಲೈಸೆನ್ಸ್ ಮತ್ತು ವಿಮೆ ಹೊಂದಿರಬೇಕು. ನಮ್ಮೆಲ್ಲರಿಗೂ ಜೀವ ಬಹಳ ಮುಖ್ಯವಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಗ್ರಾಮವಾಸ್ತವ್ಯ ಮತ್ತು ವಿನೂತನ ಕಾರ್ಯವಾಗಿ ಚೆಕ್ ಪೋಸ್ಟ್ ಅಳವಡಿಕೆ ಯಶಸ್ವಿಯಾಗಿದೆ. ಇದರಿಂದ ವಾರ್ಷಿಕ 25ಸಾವುಗಳನ್ನು ತಡೆದಿರುವ ಹೆಮ್ಮೆ ಇಲಾಖೆಯದ್ದಾಗಿದೆ. ಕಬ್ಬು ತುಂಬಿದ ಟ್ರಾಕ್ಟರಗಳು ರಿಪ್ಲೆಕ್ಟರ್ ಮತ್ತು ಸ್ಪಿಕರ್ ಬಳಸಿ, ಡ್ರಿಂಕ್ ಆಂಡ್ ಡ್ರೈವ ಮಾಡಬೇಡಿ ಎಂದರು.
ಸಿಪಿಐ ಸಂಜೀವ ಬಳಗಾರ, ಪಿಎಸೈ ಅಪ್ಪು ಐಗಳಿ ಮಾತನಾಡಿ, ಶಾಲಾ, ಕಾಲೇಜು, ವಾಹನ ಚಾಲಕರು ಸೇರಿದಂತೆ ವಿವಿದೆಡೆಗಳಲ್ಲಿ ಜಾಗೃತಿ ಮೂಡಿಸುತ್ತಾ, ಇಂದು ಕೊನೆಯ ಕಾರ್ಯಕ್ರಮ ಇದಾಗಿದೆ ಎಂದರು.
ಮುಖಂಡರಾದ ಗೌತಮ ರೋಡಕರ, ಪ್ರಭು ಗಸ್ತಿ, ರಾಜು ನಂದೆಪ್ಪನವರ, ಶಂಕರ ಕುಂಬಾರ, ಪಿ.ಎಸ್.ಮಾಸ್ತಿ, ದಯಾನಂದ ಕಾಳೆ, ಧನಪಾಲ ಬೋದೆನ್ನವರ, ಅಲ್ಲಾಭಕ್ಷ ಅಲಾಸ್, ಚಾಲಕರ ಸಂಘದ ಪದಾಧಿಕಾರಿಗಳು ಮಾಹಿತಿ ಹಂಚಿಕೊಂಡರು.
ಇದೆ ಸಂದರ್ಭದಲ್ಲಿ ಗ್ರಾಮಪಂಚಾಯತ ಹಳಿಂಗಳಿ ಅವರು ಕೊಡಮಾಡಿದ 32ಹೆಲ್ಮೆಟ್‌ಗಳನ್ನು ಡಿವೈಎಸ್‌ಪಿ ಈ.ಶಾಂತವೀರ ಹಾಗೂ ಹಳಿಂಗಳಿ ಮುಖಂಡ ರಾಜು ನಂದೆಪ್ಪನವರ ಅನೇಕರು ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್‌ಗಳನ್ನು ವಿತರಿಸಿದರು. ತದನಂತರ ಡಿವೈಎಸ್ಪಿ ನೇತೃತ್ವದಲ್ಲಿ ಹೆಲ್ಮೆಟ್‌ಗಳನ್ನು ಧರಿಸಿಕೊಂಡು ಬೈಕ್ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಹೆಲ್ಮೆಟ್ ಜಾಗೃತಿಯನ್ನು ಮೂಡಿಸಿದರು.
Kshetra Samachara
31/12/2024 04:16 pm