ಮಹಿಳಾ ಪಿಎಸ್ಐನಿಂದ ಎಫ್.ಡಿ.ಎ ನೌಕರಿ ಕೊಡಿಸೋದಾಗಿ ಯುವಕನಿಗೆ ವಂಚಿಸಿದ ಪ್ರಕರಣ ಬಯಲಿಗೆ ಬಂದಿದೆ. ವಂಚನೆ ಪ್ರಕರಣದಲ್ಲಿ ಮಹಿಳಾ ಪಿಎಸ್ಐ ಅಶ್ವಿನಿ ಅನಂತಪುರ ಅಮಾನತುಗೊಂಡಿದ್ದು, ಅಮಾನತ್ ಆದ ಪಿಎಸ್ಐ ಅಶ್ವಿನಿ ಮನೆಯವರಿಂದ ಯುವಕ ಸಂಗಮೇಶ ಝಳಕಿಗೆ ಎಂಬುವರಿಗೆ ಬೆದರಿಕೆ ಹಾಕಲಾಗುತ್ತಿದೆ.
ಅಶ್ವಿನಿ ಮನೆಯವರಿಂದ ಬೆದರಿಕೆ ಬಂದಿದ್ದಾಗಿ ಯುವಕ ಸಂಗಮೇಶ್ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ, ಬೆದರಿಕೆ ಹಿನ್ನೆಲೆ ಅಶ್ವಿನಿ ಹಾಗೂ ಕುಟುಂಬಸ್ಥರ ವಿರುದ್ಧ ಸಂಗಮೇಶ್ ದೂರು ಕೊಡಲು ಮುಂದಾಗಿದ್ದಾರೆ, ಫೋನ್ ಮೂಲಕ ಹಾಗೂ ಮನೆಗೆ ಬಂದು ಬೆದರಿಕೆ ಹಾಕಿರುವುದಾಗಿ ಸಂಗಮೇಶ್ ತಿಳಿಸಿದ್ದಾರೆ ಮತ್ತು ಆಮ್ ಅದ್ಮಿ ಪಕ್ಷದ ಮೂಲಕ ಬಾಗಲಕೋಟೆ ಎಸ್ಪಿ ಅವರನ್ನು ಸಂಗಮೇಶ ಭೇಟಿ ಮಾಡಿ ರಕ್ಷಣೆ ನೀಡುವಂತೆ ಕೋರಿದ್ದಾರೆ.
ಪಿಎಸ್ಐ ಅಶ್ವಿನಿ ಅನಂತಪುರ, ಸ್ವರೂಪ್ (ಅಶ್ವಿನಿ ಗಂಡ), ಚನ್ನಪ್ಪ ಅನಂತಪುರ (ಅಶ್ವಿನಿ ಚಿಕ್ಕಪ್ಪ), ಈರಪ್ಪ ಅನಂತಪುರ (ಅಶ್ವಿನಿ ತಂದೆ) ಮೇಲೆ ದೂರು ನೀಡಿದ್ದಾರೆ. ಎಫ್ ಡಿ ಎ ಹುದ್ದೆ ಕೊಡಿಸುವುದಾಗಿ ಪಿಎಸ್ ಐ ಅಶ್ವಿನಿ ಅನಂತಪುರ 2.10 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾರೆ. ಎಫ್ ಡಿ ಐ ಹುದ್ದೆ ಸಿಗದೆ ಇದ್ಧಾಗ ಪ್ರಶ್ನೆ ಮಾಡಿದಾಗ, ನನಗೆ ನಿನ್ಯಾರೂ ಅಂತಾ ಹೇಳಿ ಅಶ್ವಿನಿ ಜಾರಿಕೊಂಡಿದ್ದರು ಎಂದರು.
ಸದ್ಯ ಅಮಾನತುಗೊಂಡಿರುವ ಅಶ್ವಿನಿ ಎನ್.ಆರ್. ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅಮಾನತು ಗೊಂಡಿದ್ದಾರೆ ಎಂದು ಸಂಗಮೇಶ ತಿಳಿಸಿದರು.
PublicNext
20/09/2022 07:14 pm