ಬಾಗಲಕೋಟೆ: ಒಂದು ಕುಂಟುಂಬಕ್ಕೆ 200 ದಿನಗಳ ಕಾಲ ಕೆಲಸ ನೀಡಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿಕಾರರ ಸಂಘದ ಸದಸ್ಯರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಭಾಗದ ಕೂಲಿಕಾರರಾಗಿರುವ ನಮಗೆ ಸತತ ಮಳೆ ಮತ್ತು ಪ್ರವಾಹದಿಂದ ಜಮೀನುಗಳಲ್ಲಿ ಕೆಲಸ ಇಲ್ಲವಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಜಿ ಹಾಕಿದ ಕೂಡಲೇ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದರು. ಉದ್ಯೋಗಕ್ಕೆ ಬೇಕಾಗುವ ಸಾಮಗ್ರಿಗಳ ರಿಪೇರಿಗಾಗಿ ಕೂಲಿ ಹಣದ ಜತೆ 20 ರೂ. ಸೇರಿಸಿಕೊಡಬೇಕು. ಇಲ್ಲವೆ ಪಂಚಾಯತಿಯಿಂದಲೇ ಸಾಮಗ್ರಿಗಳನ್ನು ನೀಡಬೇಕು ಎಂದರು.
ಕೂಲಿ ಕೆಲಸ ಸ್ಥಳೀಯವಾಗಿ ಇಲ್ಲದೆ ಇದ್ಧಾಗ 5 ಕಿ.ಮೀ ವ್ಯಾಪ್ತಿಗಿಂತ ದೂರದ ಕೆಲಸಕ್ಕೆ ಹೋದಾಗ ಕೂಲಿಯ ಜತೆ 20 ರೂ.ಹೆಚ್ಚಿಗೆ ಸೇರಿಸಿಕೊಡಬೇಕು ಎಂದು ಒತ್ತಾಯಿಸಿದರು. ಕಾರ್ಮಿಕ ಕಾನೂನಿನ ಪ್ರಕಾರ ಕೆಲಸ ಮಾಡಿದ 15 ದಿನಗಳ ಒಳಗೆ ಕೂಲಿಗ ಹಣ ಪಾವತಿಸಬೇಕು. ವಿಳಂಬವಾದಲ್ಲಿ ಶೇ.5 ರಷ್ಟು ಹೆಚ್ಚಿನ ಕೂಲಿ ನೀಡಬೇಕು ಎನ್ನುವ ನಿಯಮ ಇದ್ದರೂ ಪಾಲನೆ ಆಗುತ್ತಿಲ್ಲ ಎಂದು ಅವರು ದೂರಿದರು. ವೈ. ಆರ್. ಪೂಜಾರಿ, ಸಾಹಿಬಬಿ ಖೈರವಾಡಗಿ, ಆರ್.ಬಿ ಶಿರೂರ ಇತರರು ಇದ್ದರು.
PublicNext
20/09/2022 03:09 pm