ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟ: ಕೂಡಲ ಸಂಗಮದ ವಿವಿಧ ಕಾಮಗಾರಿ ಪರಿಶೀಲಿಸಿದ ಕಳಸದ

ಬಾಗಲಕೋಟ: ಕೂಡಲಸಂಗಮ ಅಭಿವೃದ್ದಿ ಮಂಡಳಿ ಯಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಗಿರುವ ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯ ವಿಶೇಷಾ ಧಿಕಾರಿ ಶಿವಯೋಗಿ ಕಳಸದ ಪರಿಶೀಲಿಸಿದರು.

ಇತ್ತೀಚೆಗೆ ಕೂಡಲ ಸಂಗಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಸವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿ ಕಟ್ಟಡಕ್ಕೆ ವಿದ್ಯುತ್ತೀಕರಣ ಕಾಮಗಾರಿ ಸರಿಪಡಿಸುವುದು, ಬಣ್ಣ ಬಳಿಯುವುದು, ನೆಲಹಾಸು ದುರಸ್ತಿ ಮಾಡುವುದು ಹಾಗೂ ಲಿಪ್ಟ್‌ಗಳನ್ನು ಸುವ್ಯವಸ್ಥೆಯಲ್ಲಿಡಲು ತಿಳಿಸಿದರು.

ಬಸವ ಅಂತಾರಾಷ್ಟ್ರೀಯ ಕೇಂದ್ರದ ಹೆಚ್ಚುವರಿ ಕಟ್ಟಡಗಳಿಗೆ ಅಂತಿಮ ರೂಪ ನೀಡಬೇಕು. ಸ್ಥಳಕ್ಕೆ ಅನುಸಾರವಾಗಿ ಬಸವೇಶ್ವರ ಮೂರ್ತಿ ಹಾಗೂ ಉತ್ತಮ ಗುಣಮಟ್ಟದ ಫೋಟೋಗ್ರಾಫಿ ಚಿತ್ರಗಳನ್ನು ಅಳವಡಿಸಲು ತಿಳಿಸಿದರು.

ಈಗಾಗಲೇ ನಿರ್ಮಾಣಗೊಂಡ ಛತ್ರಗಳನ್ನು ಪ್ರವಾಸಿಗರಿಗೆ ಪವಿತ್ರ ಕ್ಷೇತ್ರದಲ್ಲಿ ತಂಗಲು ವ್ಯವಸ್ಥೆ ಮಾಡಬೇಕು. ಮದುವೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಭಕ್ತರಿಗೆ ಅವಕಾಶ ಕಲ್ಪಿಸಿ, ಇದಕ್ಕೆ ಬೇಕಾಗುವ ವಿದ್ಯುತ್ ಕಾಮಗಾರಿ ಹಾಗೂ ನೀರಿನ ವ್ಯವಸ್ಥೆಯನ್ನು ಶೀಘ್ರವಾಗಿ ಸರಿಪಡಿಸಲು ತಿಳಿಸಿದರು. ಡಿಜಿಟಲ್ ಲೈಬ್ರರಿ ವ್ಯವಸ್ಥೆ ಮಾಡುವದು ಸಂಗಮ ಕ್ಷೇತ್ರದಲ್ಲಿ ಸ್ನಾನಘಟ್ಟಿಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಿಳಿಸಿದರು.

Edited By : Abhishek Kamoji
Kshetra Samachara

Kshetra Samachara

10/10/2022 06:06 pm

Cinque Terre

4.66 K

Cinque Terre

0