ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಎರಡನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ, ಸ್ಥಳಕ್ಕೆ ಮಾಜಿ ಶಾಸಕ ಜೆ.ಟಿ. ಪಾಟೀಲ ಭೇಟಿ

ಬಾಗಲಕೋಟೆ: ಸರಕಾರದ ಕೈಗಾರಿಕೆ ಮತ್ತು ವಿಮಾನ ನಿಲ್ದಾಣಕ್ಕೆ ತಾಲೂಕಿನ ಹಲಕುರ್ಕಿ ಗ್ರಾಮದ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ, ಅಧಿಸೂಚನೆ ರದ್ದಾಗುವವರೆಗೂ ರೈತರು ಹಲಕುರ್ಕಿ ಗ್ರಾಮದ ದಿಗಂಬರೇಶ್ವರಮಠದ ಷಡಕ್ಷರ ಮಹಾಸ್ವಾಮಿಗಳ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಯನ್ನು ಹಲಕುರ್ಕಿ ಗ್ರಾಮದ ಅಗಸಿ ಮುಂದಿನ ಜಾಗೆಯಲ್ಲಿ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಧರಣಿ ಸ್ಥಳಕ್ಕೆ ಮಾಜಿ ಶಾಸಕ ಜೆ.ಟಿ.ಪಾಟೀಲ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಸರಕಾರ ಅಧಿಸೂಚನೆ ರದ್ದಾಗುವವರೆಗೂ ಧರಣಿ ಮುಂದುವರೆಯಲಿದೆ ಎಂದು ರೈತರು ತಿಳಿಸಿದರು.

ರೈತ ಮುಖಂಡರಾದ ರುದ್ರಗೌಡ ಪಾಟೀಲ, ಪ್ರಕಾಶ ನಾಯ್ಕರ, ಮುತ್ತು ನಾಯ್ಕರ, ಶಾಮಣ್ಣ, ಮಾಗುಂಡಪ್ಪ ಕಟಗೇರಿ, ರಂಗಪ್ಪ ಬಂಡಿವಡ್ಡರ, ಶೇಖಣ್ಣ ಬನ್ನಿ, ಯಮನಪ್ಪ ದಳವಾಯಿ ಸೇರಿದಂತೆ ಅಸಂಖ್ಯಾತ ರೈತರು, ಹಿರಿಯರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.

Edited By : Abhishek Kamoji
Kshetra Samachara

Kshetra Samachara

21/09/2022 09:03 pm

Cinque Terre

6.24 K

Cinque Terre

0