ಬಾಗಲಕೋಟ : ರಾಜ್ಯದಲ್ಲಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ಆದಷ್ಟು ಶೀಘ್ರವಾಗಿ ಕಾನೂನಾತ್ಮಕ ಪ್ರಕ್ರಿಯೆ ಮೂಲಕ ತೆರವು ಮಾಡಿ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಕೆ. ಅನ್ವರಬಾಷಾ ಹೇಳಿದರು.
ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಬಾಗಲಕೋಟ ಜಿಲ್ಲೆಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಮೆಹಬೂಬ ಸರಕಾವಸ ಅಧ್ಯಕ್ಷತೆಯಲ್ಲಿ ನಡೆದ ವಕ್ಫ್ ಸಂಸ್ಥೆಗಳ ಮುತವಲ್ಲಿ ಇಮಾಮ, ಪಧಾದಿಕಾರಿಗಳ ಕಾರ್ಯಾಗಾರ ದಲ್ಲಿ ಮುಖ್ಯ ಅತೀಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಕ್ಫ್ ಆಸ್ತಿಗಳ ರಕ್ಷಣೆ ಕುರಿತು ಆಡಳಿತ ಮಂಡಳಿಗಳು ಜಾಗೃತ ಕ್ರಮ ಕೈಗೊಳ್ಳಬೇಕಿದ್ದು ಸರಿಯಾದ ದಾಖಲಾತಿಗ ಳನ್ನು ಇಟ್ಟುಕೊಳ್ಳಬೇಕು, ದುರಸ್ತಿಯಾಗಬೇಕಿರುವ ದಾಖಲಾತಿಗಳನ್ನು ಸರಿಪಡಿಸಿ ಸರ್ಕಾರದ ದಫ್ತರಗಳಲ್ಲಿ ದಾಖಲಿಸಬೇಕು ಎಂದರು.
Kshetra Samachara
06/10/2022 04:51 pm