ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ವಿವಿಧೆಡೆ ಹಾಲು ಶೇಖರಣೆ ಪ್ರಾರಂಭೋತ್ಸವಕ್ಕೆ ಚಾಲನೆ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಚಿಮ್ಮಲಗಿ ಮತ್ತು ಹಿರೇ ಮುಚ್ಚಳಗುಡ್ಡದಲ್ಲಿ ಹೊಸ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಶೇಖರಣೆ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಅವಳಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಜೆ.ಹಂಡಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಹೈನುಗಾರಿಕೆ ರೈತರ ಉಪ ಕಸಬು ಆಗಿದ್ದರಿಂದ ರೈತಾಪಿ ಜನರಿಗೆ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಅತೀ ಅವಶ್ಯವಾಗಿದೆ. ಸ್ವಾವಲಂಬನೆ ಜೀವನ ನಡೆಸಲು ಪ್ರಮುಖ ಉದ್ಯೋಗವಾಗಿದೆ. ಹೆಚ್ಚಿನ ಹಾಲು ಕೊಡುವ ಜರ್ಸಿ ಹಸುಗಳನ್ನು ಪಾಲನೆ ಪೋಷಣೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಕಾಯಿಪಲ್ಲೆ ಹಾಗೂ ಜೋಳ ಕಾಳುಕಡಿಗಳನ್ನು ನಾವು ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಬೇಕಾಗುತ್ತದೆ. ಹಾಲಿನ ವ್ಯವಸ್ಥೆಯಲ್ಲಿ ಬದಲಿ ವಿಚಾರ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಲು ಒಕ್ಕೂಟದ ನಿರ್ದೇಶಕ ಐ.ಎಸ್.ಕರಿಗೌಡ್ರ ಮಾತನಾಡಿ, ಹೊಸದಾಗಿ ಪ್ರಾರಂಭಿಸಿದ ಈ ಎರಡು ಸಕಾರ ಸಂಘದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ವ್ಯವಸಾಯ ಜೊತೆಗೆ ಹೈನುಗಾರಿಕೆ ಮಾಡಲು ತಿಳಿಸಿದರು.

Edited By : Vijay Kumar
PublicNext

PublicNext

01/10/2022 10:28 pm

Cinque Terre

21.07 K

Cinque Terre

1