ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಕನ್ನಡ ಕಾವ್ಯಗಳು ಮನಸ್ಸು ಅರಳಿಸುತ್ತೆ; ಡಾ.ವೀರೇಶ ಬಡಿಗೇರ

ಬಾಗಲಕೋಟೆ: ಕಾವ್ಯಧ್ವನಿ ಮಕ್ಕಳ ಭಾವನೆ ಮತ್ತು ಮನಸ್ಸನ್ನು ಅರಳಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಡುಗೆ ಕನ್ನಡ ಶಾಲೆಗಳ ಕಡೆಗೆ ಕಾರ್ಯಕ್ರಮದ ಕಾವ್ಯ ರಚನೆ ಮತ್ತು ವಾಚನ ಸಮಾರಂಭ ಉದ್ಘಾಟಿಸಿ ಹಾಗೂ ‘ರಂಗಭೂಮಿ ಕಲಾವಿದೆ ಗೀತಾರಾಣ ಚಿಮಲ’ ಅವರ ಪರಿಚಯಾತ್ಮಕ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕಾವ್ಯವು ಸಹಿತವಾಗಿರಬೇಕು, ಅದು ಸಹೃದಯರಿಗೆ ಆನಂದವನ್ನುಂಟು ಮಾಡುವಂತಿರಬೇಕು. ಕೇಳುವ ಮತ್ತು ಆಲಿಸುವ ಭಾವನೆಯನ್ನು ಬೆಳೆಸಿಕೊಂಡಾಗ ಕಾವ್ಯ ರಚಿಸುವ ಮತ್ತು ವಾಚಿಸುವ ಮನಸ್ಸು ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಕಾವ್ಯಗಳಾದ ಹಂತಿಪದ, ಲಾವಣ ಪದ, ಹೊಳಿಪದ, ಡೊಳ್ಳಿನ ಹಾಡು, ಬಿಸುಕಲ್ಲಿನ ಹಾಡು, ಸೋಬಾನ ಪದ, ಭಜನಾ ಹಾಡುಗಳು ಮುಂತಾದ ಜಾನಪದ ಕಾವ್ಯ ಪ್ರಕಾರಗಳು ನಮ್ಮ ಜನಪದರ ಬದುಕನ್ನು ಸುಂದರಗೊಳಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಶಾಲೆಗಳ ಮಕ್ಕಳಿಗೆ ಕನ್ನಡ ಕಾವ್ಯ ಪರಂಪರೆಯನ್ನು ತಿಳಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

ಹತ್ತನೆಯ ತರಗತಿ ಐದು ವಿದ್ಯಾರ್ಥಿನಿಯರು ಕನ್ನಡ ಪಠ್ಯದ ಕಾವ್ಯಗಳನ್ನು ವಾಚಿಸಿದರು, ಅವರಿಗೆ ಕನ್ನಡ ಪುಸ್ತಕಗಳು ನೀಡಿ ಗೌರವಿಸಲಾಯಿತು. ಕಸಪಾ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಸಂಗಮೇಶ ಬಡಿಗೇರ, ತಾಲೂಕ ಘಟಕದ ಗೌರವ ಕಾರ್ಯದರ್ಶಿ ಯಲ್ಲಪ್ಪ ಮನ್ನಿಕಟ್ಟಿ, ಕೋಶಾಧ್ಯಕ್ಷ ವಿಠಲಸಾ ಬದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Edited By : Abhishek Kamoji
Kshetra Samachara

Kshetra Samachara

29/09/2022 02:32 pm

Cinque Terre

6.02 K

Cinque Terre

0