ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಡಾ. ಪ್ರಕಾಶಜಿ ಕರೆ

ಬಾಗಲಕೋಟೆ: ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ, ಅದುವೇ ನಿಜವಾದ ಸಂಪತ್ತು, ಅದಕ್ಕಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಬಿಜೆಪಿ ರಾಜ್ಯ ಪ್ರಬುದ್ಧರ ಪ್ರಕೋಷ್ಟದ ಸಹ ಸಂಚಾಲಕ ಡಾ. ಪ್ರಕಾಶಜಿ ಅವರು ಸಲಹೆ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ಯ ಬಿಜೆಪಿಯ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ, ಪತ್ರಿಕಾ ಛಾಯಾಗ್ರಾಹಕರಿಗೆ, ಪತ್ರಿಕಾ ವಿತರಕರು ಹಾಗೂ ಅವರ ಕುಟುಂಬಸ್ಥರಿಗೆ ನವನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ನಿತ್ಯ ಕಾಯಕದಲ್ಲಿ ನಿರತರಾಗಿರುತ್ತಾರೆ, ಆದರೆ ಆರೋಗ್ಯದಲ್ಲಿ ಕಾಳಜಿ ವಹಿಸದಿದ್ದರೆ ಆರೋಗ್ಯ ಏರುಪೇರಾಗುತ್ತದೆ, ಅದಕ್ಕಾಗಿ ಆರೋಗ್ಯದ ಬಗ್ಗೆ ಸಮಯವನ್ನು ಮೀಸಲಿಟ್ಟು ಕಾಳಜಿ ವಹಿಸಬೇಕೆಂದು ಸಲಹೆ ಮಾಡಿದರು.

ಕಾನಿಪ ಜಿಲ್ಲಾಧ್ಯಕ್ಷ ಆನಂದ ಧಲಭಂಜನ್ ಅವರು ಮಾತನಾಡಿ ನಿತ್ಯ ಒತ್ತಡದಲ್ಲಿ ಮಾಧ್ಯಮದವರು ಆರೋಗ್ಯ ದತ್ತ ಗಮನ ಹರಿಸಬೇಕಿದೆ ಎಂದರು.

ಡಾ.ದೇಸಾಯಿ, ಡಾ. ಬಸವರಾಜ ಕಡಿವಾಲ, ಡಾ. ಗಂಗಾದರ ಅಂಗಡಿ, ಡಾ. ವೈಷ್ಣವಿ ಮಾನೆ, ಡಾ. ಅಮರೇಶ ಸದಾಪ್ಪಗೋಳ, ಡಾ. ಕಲ್ಮೇಶ ಮಡಿವಾಳ, ಡಾ. ಶಿವಪುತ್ರ ಬಾಲರಡ್ಡಿ ಮತ್ತಿತರರು ಶಿಬಿರವನ್ನು ನಡೆಸಿಕೊಟ್ಟರು.

Edited By : Vijay Kumar
PublicNext

PublicNext

22/09/2022 11:17 pm

Cinque Terre

19.27 K

Cinque Terre

0