ಬಾಗಲಕೋಟೆ: ಬಾದಾಮಿಯ ಹಜರತ ಸೈಯದ ಸಾದಾತ ದರ್ಗಾ ಚಾರಿಟೇಬಲ್ ಟ್ರಸ್ಟ್(ರಿ)ನಿಂದ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಹಜರತ್ ಸೈಯದ್ ಬಾದಷಾ ದರ್ಗಾ ಉರುಸು ಅಂಗವಾಗಿ ಶರಣರ ನಡಿಗೆ ಭಾವೈಕ್ಯತೆಯ ಕಡೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬುಧವಾರ ಗಂಧ, ಮಧ್ಯಾಹ್ನ ಶರಣರ ನಡಿಗೆ, ಸಂಜೆ ಉರುಸು, ಭಾವೈಕ್ಯತೆಯ ಸಭೆ ಪಟ್ಟಣದ ಗ್ರಾಮದೇವತೆಯ ಮಂಟಪದಲ್ಲಿ ಜರುಗಿತು. ಗುರುವಾರ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ದರ್ಗಾದಲ್ಲಿ ಆರಾಧನಾ ಮಹೋತ್ಸವ ಜರುಗಿತು. ಕಾರ್ಯಕ್ರಮದಲ್ಲಿ ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು, ವಿಜಯಪೂರದ ಹಜರತ್ ಸೈಯದ್ ಮೊಹ್ಮದ ಗೇಸುದರಾಜ್ ಹುಸೇನ ದಿವ್ಯ ಸಾನಿಧ್ಯ ವಹಿಸಿದ್ದರು. ಮೌಲಾನಾ ಅಬ್ದುಲ್ ಸಮದ್ ಮುಲ್ಲಾ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮುಖಂಡರಾದ ಎ.ಸಿ.ಪಟ್ಟಣದ, ಮಹಾಂತೇಶ ಮಮದಾಪೂರ, ಹನಮಂತ ಮಾವಿನಮರದ, ರಾಜಮಹ್ಮದ ಬಾಗವಾನ, ನಾಗರಾಜ ಕಾಚೆಟ್ಟಿ, ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡ್ರ, ಫಾರೂಕ್ ಅಹ್ಮದ ದೊಡಮನಿ, ಮಂಜುನಾಥ ಹೊಸಮನಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
PublicNext
22/09/2022 10:52 pm