ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಭಾರತೀಯ ಸಂಸ್ಕೃತಿ ಶ್ರೀಮಂತಗೊಳಿಸಿದ್ದು ವಿಶ್ವಕರ್ಮರು

ಬಾಗಲಕೋಟೆ: ಪಂಚವೃತ್ತಿಗಳ ಮೂಲಕ ಭಾರತಿಯ ಸಂಸ್ಕೃತಿ ಶ್ರಿಮಂತಗೊಳಿಸಿ ಕರ್ಮಯೋಗದ ತತ್ವವನ್ನು ಸಾರಿದವರು ವಿಶ್ವಕರ್ಮರು ಎಂದು ಮುರನಾಳ ಮಳೆ ರಾಜೇಂದ್ರಸ್ವಾಮಿ ಮಠದ ಗುರುನಾಥಸ್ವಾಮೀಜಿ ಮಹಾಪುರುಷ ಹೇಳಿದ್ದಾರೆ.

ಬಿಳಗಿ ತಾಲೂಕಿನ ಅರಕೇರಿ ಗ್ರಾಮದಲ್ಲಿ ನಡೆದ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿಶ್ವಕರ್ಮರು ಶಿಲ್ಪಕಲೆ, ಬಡಿಗತನ. ಪತ್ತಾರಿಕೆ, ಕಮ್ಮಾರಿಕೆ ಹಾಗೂ ಕಂಚುಗಾರಿಯ ಕಲೆಗಳ ಮೂಲಕ ಭಾರತಿಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದು ವಿಶ್ವಕರ್ಮರು. ವಿಶ್ವವನ್ನು ಸೃಷ್ಠಿಮಾಡಿ ಅನೇಕ ದೇವಾನುದೇವತೆಗಳನ್ನು ಸೃಷ್ಠಿಮಾಡಿ ಅವರಿಗೆಲ್ಲಾ ಒಂದೊಂದು ಜವಾಬ್ದಾರಿ ಕೊಟ್ಟು ತನ್ನ ಚೈತನ್ಯ ಮೂಲಕ ಭಗವಾನ ವಿಶ್ವಕರ್ಮ ಈ ಭೂಮಂಡಲವನ್ನು ಬೇಳಗುತ್ತಿದ್ದಾನೆ ಎಂದರು.

ಕಾರ್ಯಮದಲ್ಲಿ ಉಪನ್ಯಾಸ ನೀಡಿದ ಸಾಹಿತಿಗಳಾದ ಪ್ರೊ. ಕೆ.ಸುನಂದಾ ಅವರು, ಎಲ್ಲ ಸಮುದಾಯ ವರೊಂದಿಗೆ ವಿಶ್ವಕರ್ಮರು ಸಹೋದರಂತೆ ಇದ್ದಾರೆ, ಮನುಷ್ಯನ ಹುಟ್ಟಿನಿಂದ ಸಾವಿನ ವರೆಗೂ ವಿಶ್ವಕರ್ಮರು ಬೇಕಾಗಿದ್ದು ವಿಶ್ವಕರ್ಮ ಮತ್ತು ಪರಂಪರೆ ಹಾಗೂ ವಿಶ್ವಕರ್ಮ ತತ್ವದ ಬಗ್ಗೆ ಹೇಳಿದರು. ಅರಕೇರಿಯ ಮಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Edited By : Vijay Kumar
Kshetra Samachara

Kshetra Samachara

20/09/2022 10:20 pm

Cinque Terre

1.8 K

Cinque Terre

0