ಬಾಗಲಕೋಟೆ: ಕೆರೂರನ ಅಮಾಯಕ ಹಿಂದು ಯುವಕರ ಮೇಲೆ ಚಿತ್ರಹಿಂಸೆ ನೀಡಿದ ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸೆ. 10 ರಿಂದ ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಧರಣಿಗೆ ಹಿಂಜಾವೇ ಸಂಘಟನೆ ನಿರ್ಧರಿಸಿದೆ.
ಹಿಂಜಾವೇ ಕ್ಷೇತ್ರದ ಮುಖ್ಯಸ್ಥ ಜಗದೀಶ್ ಕಾರಂತರ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ ಆರಂಭಗೊಳ್ಳಲಿದೆ. ಪ್ರತಿದಿನ ಜಿಲ್ಲೆಯ ಒಂದು ತಾಲೂಕಿನಿಂದ ಹಿಂದು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ . ಸರ್ಕಾರದ ಹಿಂಜಾವೇ ನೀಡಿದ ಗಡುವಿನಲ್ಲಿ ಪೊಲೀಸರ ವಿರುದ್ದ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದೆ.
Kshetra Samachara
06/10/2022 05:28 pm