ಮೇಷ: ಅನಾರೋಗ್ಯ ಕಾಡಬಹುದು. ಮಕ್ಕಳಿಂದ ತೊಂದರೆಯಾಗಬಹುದು. ಹಿರಿಯರ ಕೋಪಕ್ಕೆ ಗುರಿಯಾಗುವಿರಿ.
ವೃಷಭ: ಋಣರೋಗ ಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ವಾಗ್ವಾದ ಉಂಟಾಗಬಹುದು. ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟ.
ಮಿಥುನ: ಸಂಕಷ್ಟಕ್ಕೆ ಸಿಲುಕುವಿರಿ. ಶುಭಕಾರ್ಯಗಳನ್ನು ಮುಂದೂಡಬೇಕಾಗುವುದು. ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ.
ಕಟಕ: ಮಾನಸಿಕ ಕಿರಿಕಿರಿ, ತೊಂದರೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆತು ಸಂತಸ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.
ಸಿಂಹ: ಮಕ್ಕಳಿಂದ ಕಿರಿಕಿರಿ ಅನುಭವಿಸಬೇಕಾಗುವುದು. ಅನಾರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ. ಕೆಲಸ ಕಾರ್ಯಗಳಲ್ಲಿ ವಿಘ್ನ.
ಕನ್ಯಾ: ಉದ್ಯೋಗ ಲಾಭ. ಸಾಲಗಾರರಿಂದ ಮುಕ್ತಿ. ಶತ್ರು ದಮನ ತಂತ್ರ ಬಳಸುವಿರಿ. ಬಾಧೆಗಳಿಗೆ ಗುರುಗಳಿಂದ ಮಾರ್ಗದರ್ಶನ.
ತುಲಾ: ನಿದ್ರಾಭಂಗ. ಉದ್ಯೋಗ ಒತ್ತಡಗಳು. ಕಾಲು ನೋವು ಕಾಡಬಹುದು. ಮಂದತ್ವ, ಬುದ್ಧಿ ಚಂಚಲತೆ, ವೈರಾಗ್ಯದ ಭಾವ ಅಧಿಕ.
ವೃಶ್ಚಿಕ: ಆಕಸ್ಮಿಕ ಅವಘಡಗಳಿಂದ ಖರ್ಚು. ಸ್ಥಿರಾಸ್ತಿ, ಭೂಮಿ, ವಾಹನ ಖರೀದಿಯಲ್ಲಿ ಮೋಸ. ಕೆಲಸ ಕಾರ್ಯಗಳಲ್ಲಿ ಸೋಮಾರಿತನ.
ಧನುಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ. ಪ್ರಯಾಣಕ್ಕೆ ಅಡೆತಡೆ ಆಗಬಹುದು. ಅವಮಾನಗಳಿಗೆ ಗುರಿಯಾಗುವ ಸಂದರ್ಭ.
ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ. ಆರ್ಥಿಕ ಸಹಾಯ ದೊರೆಯುವುದು. ದಾಯಾದಿ ಕಲಹ. ನ್ಯಾಯಾಲ ಯದ ಕೇಸ್ಗಳಲ್ಲಿ ಜಯ.
ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗಲಿದೆ. ಉದ್ಯೋಗ ಬದಲಾವಣೆಗೆ ಅಡೆತಡೆ ಎದುರಾಗುವುದು. ದಾಂಪತ್ಯದಲ್ಲಿ ವಿರಸ.
ಮೀನ: ಆಕಸ್ಮಿಕ ಅವಘಡಗಳಿಂದ ಕಿರಿಕಿರಿ. ವಾಹನಗಳಿಂದ ಮತ್ತು ಕಬ್ಬಿಣದ ವಸ್ತುಗಳಿಂದ ಪೆಟ್ಟು. ಕೆಲಸ ಕಾರ್ಯಗಳಲ್ಲಿ ಅಡೆತಡೆ.
PublicNext
29/09/2022 07:20 am