ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 17.9.2022

ಮೇಷ: ಅಗತ್ಯಕ್ಕಿಂತ ಜಾಸ್ತಿ ಹಣ ವ್ಯಯವಾಗುವ ಸಾಧ್ಯತೆ. ಮನಸ್ಸಿಗೆ ಸಮಾಧಾನವಾಗಿ ನೆಮ್ಮದಿ. ವ್ಯಾಪಾರದಲ್ಲಿ ಶುಭಫಲಗಳು.

ವೃಷಭ: ಸ್ನೇಹಿತರಿಂದ ಆಪ್ತ ಸಹಕಾರ ದೊರೆಯುವುದು. ರಕ್ತದೊತ್ತಡ ಕಡಿಮೆಯಾಗುತ್ತದೆ. ಹೋಟೆಲ್ ಉದ್ಯಮಿಗಳಿಗೆ ಒಳಿತು.

ಮಿಥುನ: ಕುಟುಂಬದಲ್ಲಿ ಸಂತಸ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಸಂತಸದಾಯಕ ದಿನ. ಉನ್ನತ ಅಧ್ಯಯನದಲ್ಲಿ ಹೊಸ ಆಶಾಕಿರಣ.

ಕಟಕ: ಉದ್ಯೋಗಿಗಳಿಗೆ ಯಶಸ್ಸು. ಸ್ವಂತ ಉದ್ಯೋಗದಲ್ಲಿ ಒಳ್ಳೆಯದಾಗಲಿದೆ. ಕಟ್ಟಡ ನಿರ್ವಣದಲ್ಲಿ ತೊಡಗಿರುವವರಿಗೆ ಹಿನ್ನಡೆ.

ಸಿಂಹ: ಸಹೋದರರಿಂದ ಸಹಕಾರ. ಆರ್ಥಿಕ ಒಪ್ಪಂದಗಳಲ್ಲಿ ಎಚ್ಚರವಹಿಸಿ. ರಾಸಾಯನಿಕ ವಸ್ತು ಮಾರಾಟಗಾರರಿಗೆೆ ಉತ್ತಮ ದಿನ.

ಕನ್ಯಾ: ವಾದ ವಿವಾದಗಳಿಂದ ದೂರವಿರಿ. ಪ್ರಯಾಣದಿಂದ ಅನಗತ್ಯ ಧನಹಾನಿಯಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಏರುಪೇರು.

ತುಲಾ: ಅನವಶ್ಯಕ ಪ್ರಯಾಣ ಮಾಡಬೇಕಾಗುವುದು. ಆರೋಗ್ಯದಲ್ಲಿ ತೊಂದರೆಯಾದೀತು. ಮನಸ್ಸು ದುರ್ಬಲವಾದಂತೆ ಅನಿಸುವುದು.

ವೃಶ್ಚಿಕ: ವೃತ್ತಿಯಲ್ಲಿ ನಿರೀಕ್ಷಿತ ಗುರಿ ಸಾಧಿಸುವಿರಿ. ಶಿಕ್ಷಕರಿಗೆ ಅನುಕೂಲಕರ ಸಮಯ. ಧಾರ್ವಿುಕ ಮನೋಭಾವ ವೃದ್ಧಿಯಾಗುವುದು.

ಧನುಸ್ಸು: ಮರದ ಕೆಲಸಗಾರರಿಗೆ ಅನುಕೂಲ. ಕಟ್ಟಡ ಕಾರ್ವಿುಕರಿಗೆ ಪ್ರಗತಿದಾಯಕ ದಿವಸ. ಶುಭ ಕಾರ್ಯಗಳಲ್ಲಿ ಭಾಗಿ.

ಮಕರ: ಪತ್ರಕರ್ತರು ಜಯಗಳಿಸುವರು. ರಾಜಕೀಯ ಪ್ರವೇಶಕ್ಕೆ ಸೂಕ್ತವಾದ ಸಮಯ ಕೂಡಿಬಂದಿದೆ. ಆತ್ಮವಿಶ್ವಾಸ ಹೆಚ್ಚುತ್ತದೆ.

ಕುಂಭ: ಹೂಡಿಕೆಗಳು ಲಾಭದಾಯಕವಾಗಿರುತ್ತವೆ. ಉದ್ವೇಗವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ತೈಲ ಮಾರಾಟದಲ್ಲಿ ಶುಭ.

ಮೀನ: ದುಡುಕದೆ ನಿರ್ಣಯ ತೆಗೆದುಕೊಳ್ಳಿ. ವಿವಾಹದಲ್ಲಿ ತೊಂದರೆ ಉಂಟಾಗಬಹುದು. ಆಡಳಿತ ವರ್ಗದವರಿಗೆ ಒಳ್ಳೆಯ ದಿನ.

Edited By : Nirmala Aralikatti
PublicNext

PublicNext

17/09/2022 06:51 am

Cinque Terre

24.21 K

Cinque Terre

0