ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: ಬುಧವಾರ 13 ಜುಲೈ 2022

ಮೇಷ ರಾಶಿ: ಈ ರಾಶಿಯ ಯುವಕರು ಕೇವಲ ಮಾತನಾಡದೆ ಕೆಲಸ ಮಾಡಿ ತೋರಿಸುವ ಅಗತ್ಯವಿದೆ. ಯಾರನ್ನೂ ಮೆಚ್ಚಿಸಲು ತೋರಿಕೆಯ ನಾಟಕವಾಡುವುದು ನಿಮಗೆ ಹೊರೆಯಾಗಬಹುದು ಎಚ್ಚರ. ಇದನ್ನು ಹೊರತುಪಡಿಸಿ ಕಲೆ, ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇಂದು ಕೆಲಸ ಹೆಚ್ಚಾಗಬಹುದು.

ವೃಷಭ ರಾಶಿ: ಈ ರಾಶಿಯವರು ಉದ್ಯೋಗದಲ್ಲಿ ನೀವು ನಿರೀಕ್ಷಿಸಿದ ಫಲ ಪಡೆಯುವಿರಿ. ಹಾಗಂತ ಸೋಮಾರಿಯಾಗಿರುವುದು ಬೇಡ. ನಿಮ್ಮ ಪ್ರಯತ್ನವನ್ನು ಮುಂದುವರೆಸಿ. ದ್ಯಮಿಗಳು ತಮ್ಮ ಸ್ವಭಾವದಲ್ಲಿ ನಮ್ರತೆ ಮತ್ತು ಸರಳತೆಯನ್ನು ಕಾಪಾಡಿಕೊಳ್ಳಬೇಕು. ಇದು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಸೃಷ್ಟಿಸುತ್ತದೆ.

ಮಿಥುನ ರಾಶಿ: ಈ ರಾಶಿಯ ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಿಮ್ಮ ತಯಾರಿ ಇದ್ದರೆ ಒಳಿತು. ಕಬ್ಬಿಣದ ವ್ಯಾಪಾರ ಮಾಡುವವರು ಇಂದು ಉತ್ತಮ ಲಾಭವನ್ನು ಗಳಿಸುತ್ತಾರೆ, ಇತರ ವ್ಯವಹಾರಗಳು ಸಾಮಾನ್ಯ ವೇಗದಲ್ಲಿ ನಡೆಯುತ್ತವೆ.

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯ ಜನರು ಯಾವುದೇ ಕೆಲಸವನ್ನು ತರಾತುರಿಯಲ್ಲಿ ಇತ್ಯರ್ಥಪಡಿಸಲು ಪ್ರಯತ್ನಿಸಬಾರದು. ಯಾವುದೇ ಕೆಲಸವನ್ನು ಸಂಪೂರ್ಣ ತಿಳುವಳಿಕೆ ಮತ್ತು ಜವಾಬ್ದಾರಿಯಿಂದ ಮಾಡಿ. ಹೋಟೆಲ್ ರೆಸ್ಟೋರೆಂಟ್‌ನ ವ್ಯಾಪಾರಿಗಳು ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು ಏಕೆಂದರೆ ಆಹಾರ ಮತ್ತು ಪಾನೀಯದ ವಿಷಯದಲ್ಲಿ ಗುಣಮಟ್ಟ ಮುಖ್ಯವಾಗಿದೆ.

ಸಿಂಹ ರಾಶಿ: ಈ ರಾಶಿಚಕ್ರದ ಸಾಫ್ಟ್‌ವೇರ್ ಕಂಪನಿಗಳಿಗೆ ಸಂಬಂಧಿಸಿದ ಜನರು ಹೆಚ್ಚಿನ ಕೆಲಸವನ್ನು ಮಾಡಬೇಕಾಗುತ್ತದೆ, ಯೋಜನೆಯನ್ನು ಸಮಯಕ್ಕೆ ಪೂರ್ಣಗೊಳಿಸಲು ಸರಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಸಹೋದ್ಯೋಗಿಗಳೊಂದಿಗೆ ಕಿರಿ ಕಿರಿ ಮಾಡಿಕೊಳ್ಳಬೇಡಿ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಹೊಸ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಸಹೋದ್ಯೋಗಿಗಳೊಂದಿಗೆ ಪೈಪೋಟಿ ಸ್ವಲ್ಪ ಹೆಚ್ಚಾಗಿರುತ್ತದೆ, ಆದರೆ ಇದು ಆರೋಗ್ಯಕರ ಸ್ಪರ್ಧೆಯ ರೂಪದಲ್ಲಿ ಉಳಿಯಲಿ. ಉದ್ಯಮಿಗಳು ಹೂಡಿಕೆ ಮಾಡುವ ಮೊದಲು ಅದರ ಆಗು ಹೋಗುಗಳ ಬಗ್ಗೆ ಸರಿಯಾದ ಜ್ಞಾನ ಪಡೆಯಿರಿ. ಇಲ್ಲವೇ ಕೈ ಸುಟ್ಟಿಕೊಳ್ಳಬೇಕಾದೀತು ಎಚ್ಚರ.

ತುಲಾ ರಾಶಿ: ಈ ದಿನ ಈ ರಾಶಿಯ ಜನರು ಸಮಸ್ಯೆಗಳಿಂದ ಹೊರಬರುವ ಅವಕಾಶ ಪಡೆಯುವಿರಿ. ವ್ಯಾಪಾರದಲ್ಲಿ ಇಂದು ಲಾಭ ಸಿಗಲಿಲ್ಲ ಎಂಬ ಬೇಸರ ಬೇಡ. ಇಂದಲ್ಲಾ ನಾಳೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಖಂಡಿತ ದೊರೆಯುತ್ತದೆ. ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಆಹಾರದ ಬಗ್ಗೆ ಕಾಳಜಿವಹಿಸಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ಯಾವುದೇ ಕೆಲಸವನ್ನು ಮುಂದೂಡಬೇಡಿ. ಅದರಲ್ಲೂ ಕಚೇರಿ ಕೆಲಸಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಿ. ಕ್ಷಣಿಕ ಕೋಪಕ್ಕೆ ಬಲಿಯಾಗದಿರಿ, ಇದು ನಿಮ್ಮ ಇಡೀ ದಿನವನ್ನು ಹಾಳು ಮಾಡುತ್ತದೆ.

ಧನು ರಾಶಿ: ಈ ರಾಶಿಯ ಜನರು ತಮ್ಮ ಅಚ್ಚುಕಟ್ಟಾದ ಕೆಲಸದಿಂದ ಕಚೇರಿಯಲ್ಲಿ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಹೊಸ ವ್ಯಾಪಾರ-ವ್ಯವಹಾರದಲ್ಲಿ ಲಾಭ ಗಳಿಸುವ ಸಾಧ್ಯತೆ ಇದೆ. ಯಾವುದೇ ಸಂಬಂಧವನ್ನು ಉಳಿಸಿಕೊಳ್ಳಲು ಸಣ್ಣ-ಪುಟ್ಟ ವಿಷಯಗಳನ್ನು ಮರೆಯುವುದು ತುಂಬಾ ಅಗತ್ಯ ಎಂಬುದನ್ನು ನೆನಪಿಡಿ.

ಮಕರ ರಾಶಿ: ಮಕರ ರಾಶಿಯ ಮಿಲಿಟರಿ ಇಲಾಖೆಗೆ ಸಂಬಂಧಿಸಿದ ಜನರು ವರ್ಗಾವಣೆ ಪತ್ರವನ್ನು ಪಡೆಯಬಹುದು. ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಉದ್ಯಮಿಗಳಿಗೆ ಬ್ಯಾಂಕಿನಿಂದ ಸಾಲ ದೊರೆಯಬಹುದು. ಇಂದು ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಎಚ್ಚರವಹಿಸಿ.

ಕುಂಭ ರಾಶಿ: ನೀವು ನಿಮ್ಮ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಯೋಜಿಸಿ ಕಾರ್ಯರೂಪಕ್ಕೆ ತರುವುದು ಅನುಕೂಲಕರವಾಗಿರಲಿದೆ. ಉದ್ಯೋಗಿಗಳೊಂದಿಗೆ ಸಂಯಮದಿನ ವರ್ತಿಸಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಮನಸ್ಸಿನ ಮಾತನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು.

ಮೀನ ರಾಶಿ: ಈ ರಾಶಿಯವರಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಎಚ್ಚರಿಕೆಯಿಂದ ಮಾರಾಟ ಮಾಡಬೇಕು. ಇಲ್ಲವೇ ನಷ್ಟವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ.

Edited By : Nagaraj Tulugeri
PublicNext

PublicNext

13/07/2022 08:03 am

Cinque Terre

29.57 K

Cinque Terre

0