ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 5.7.2022

ಷ: ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ವಿರೋಧಿಗಳ ಕುತಂತ್ರ ಬಯಲು. ಚಿಂತೆ ಬೇಡ. ಲೋಹ ವ್ಯಾಪಾರದಲ್ಲಿ ಅಭಿವೃದ್ಧಿ.

ವೃಷಭ: ಬಂಧು-ಮಿತ್ರರ ಆಗಮನದಿಂದ ನೆಮ್ಮದಿ. ಆರೋಗ್ಯ ಸುಧಾರಣೆಗೆ ಯೋಗದ ಮೊರೆ ಹೋಗಿ. ಪಶು ಪಕ್ಷಿಗಳಿಗೆ ಆಹಾರ ನೀಡಿ.

ಮಿಥುನ: ಆತ್ಮವಿಶ್ವಾಸ ತುಂಬುವ ಪ್ರಯತ್ನ. ಉದ್ಯೋಗದಲ್ಲಿ ಆತ್ಮವಿಶ್ವಾಸದ ಬೆಳವಣಿಗೆ. ಅತಿಯಾಗಿ ಪ್ರೀತಿಸುವವರಿಂದ ಸಾಂತ್ವನ.

ಕಟಕ: ಮೇಲಧಿಕಾರಿಗಳಿಂದ ಕಿರಿಕಿರಿ. ಅನಿರೀಕ್ಷಿತವಾದ ಬೆನ್ನುನೋವು ಕಂಡುಬರಲಿದೆ. ನಿಗದಿತ ಕಾರ್ಯ ಗಳಲ್ಲಿ ಯಶಸ್ಸು. ಧನಾಗಮನ.

ಸಿಂಹ: ಸಾಮಾಜಿಕ ಗೌರವಾದರ ಪಡೆಯುವಿರಿ. ಸತ್ಪುರುಷರ ದರ್ಶನ. ಚಿನ್ನಾಭರಣ ಖರೀದಿ ಸಾಧ್ಯತೆ. ದಾಂಪತ್ಯದಲ್ಲಿ ವಿರಸ.

ಕನ್ಯಾ: ವಸ್ತ್ರವಿನ್ಯಾಸಕಾರರಿಗೆ ಉತ್ತಮ ಲಾಭ. ಹೆಚ್ಚಿನ ಜಬಾಬ್ದಾರಿ ನಿಭಾಯಿಸುವಲ್ಲಿ ಯಶಸ್ಸು. ಆತ್ಮೀಯರಲ್ಲಿ ಸಂತೋಷ ಹಂಚಿಕೊಳ್ಳಿ.

ತುಲಾ: ವ್ಯವಹಾರದಲ್ಲಿ ಪ್ರಗತಿ. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಭಾಗ್ಯ ಒದಗಿಸಿಕೊಡುವ ಸಾಧ್ಯತೆ. ಆರ್ಥಿಕವಾಗಿ ನೆಮ್ಮದಿಯ ಕ್ಷಣ.

ವೃಶ್ಚಿಕ: ದೂರಪ್ರಯಾಣದ ಸಾಧ್ಯತೆ. ಆರೋಗ್ಯದಲ್ಲಿ ಪ್ರಗತಿ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಉದ್ಯೋಗದಲ್ಲಿ ಆಸಕ್ತಿ.

ಧನುಸ್ಸು: ಫಲಿತಾಂಶ ನಿಮ್ಮ ಪರವಾಗಿ ಇರಲಿದೆ. ರಕ್ಷಣಾ ಕ್ಷೇತ್ರದಲ್ಲಿ ಇರುವವರಿಗೆ ಕಠಿಣ ಸವಾಲು ಸಾಧ್ಯತೆ. ಕಚೇರಿ ಕೆಲಸದಲ್ಲಿ ಯಶಸ್ಸು.

ಮಕರ: ದುಡುಕುತನ ಒಳ್ಳೆಯದಲ್ಲ. ಯಾವುದೇ ವಿಚಾರಕ್ಕೂ ಮತ್ತೊಮ್ಮೆ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಕುಂಭ: ಅನಿರೀಕ್ಷಿತ ಬೆಳವಣಿಗೆಯಿಂದ ಅಧಿಕಾರ ಹೊಂದು ವಿರಿ. ವಿರೋಧಿಗಳಿಂದಲೂ ಸೈ ಎನ್ನಿಸಿಕೊಳ್ಳುವಂತಹ ಕಾರ್ಯಸಾಧನೆ.

ಮೀನ: ವೈದ್ಯವೃತ್ತಿಯವರಿಗೆ ಅಧಿಕ ಶ್ರಮ. ಸ್ತ್ರೀಯರಿಗೆ ಅನುಕೂಲಕರ ಪರಿಸ್ಥಿತಿ ನಿರ್ವಣವಾಗಲಿದೆ. ಚಿನ್ನಾಭರಣ ಖರೀದಿ ಸಾಧ್ಯತೆ.

Edited By : Nirmala Aralikatti
PublicNext

PublicNext

05/07/2022 06:58 am

Cinque Terre

58.13 K

Cinque Terre

0