ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 21.6.2022

ಮೇಷ: ಆರೋಗ್ಯ ಕೈ ಕೊಡಬಹುದು, ವಿಶೇಷ ಕಾಳಜಿ ವಹಿಸಿ. ಅನವಶ್ಯಕ ತಿರುಗಾಟ ನಿಯಂತ್ರಿಸಿ. ಸಹೋದರರಿಂದ ಸಲಹೆ.

ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ದೃಢನಿರ್ಧಾರವನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಅಸಮಾಧಾನ. ಕಲಾವಿದರಿಗೆ ಲಾಭ.

ಮಿಥುನ: ಹಿರಿಯರ ಅನಾರೋಗ್ಯದ ವಾರ್ತೆ. ಸಹೋದ್ಯೋಗಿ ಗಳಿಂದ ವಿರೋಧ. ಕಾರ್ಯಗಳಲ್ಲಿ ಅಪಜಯ. ದಿನಾಂತ್ಯದಲ್ಲಿ ಶುಭವಾರ್ತೆ.

ಕಟಕ: ಆತ್ಮೀಯರ ಸಮಾಗಮ. ಹಿತೈಷಿಗಳಿಂದ ಮುಖ್ಯವಾದ ವಿಚಾರದಲ್ಲಿ ಸಲಹೆ. ಅನಾರೋಗ್ಯ ಬಾಧಿಸಬಹುದು, ಹುಷಾರು.

ಸಿಂಹ: ಎಷ್ಟೋ ಕಾಲದಿಂದ ತೊಂದರೆ ಕೊಡುತ್ತಿದ್ದ ಶತ್ರುವಿನ ದಮನ. ಕೋರ್ಟು ವ್ಯವಹಾರಗಳಲ್ಲಿ ಜಯ. ನಂಬಿದವರಿಂದಲೇ ಮೋಸ.

ಕನ್ಯಾ: ಮಾನಸಿಕ ಚಾಂಚಲ್ಯ. ಲೇಖಕ ವೃತ್ತಿಯವರಿಗೆ ಒಳ್ಳೆಯ ದಿನ. ಕಲಾಕ್ಷೇತ್ರದವರಿಗೆ ಉತ್ತಮ ಫಲ. ಫಲ ಸಿಗುವ ಸಮಯದಲ್ಲಿ ವಿಘ್ನ.

ತುಲಾ: ವಾಹನ ಚಾಲನೆಯಲ್ಲಿ ಜಾಗರೂಕತೆಯಿರಲಿ. ಉದ್ಯೋಗದಲ್ಲಿ ಸ್ಥಾನಮಾನದ ನಿರೀಕ್ಷೆ. ದಿನಾಂತ್ಯದಲ್ಲಿ ಸಂತಸದ ವಾತಾವರಣ.

ವೃಶ್ಚಿಕ: ಹಿತಶತ್ರುಗಳ ಕಾಟ. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯುವುದು ಕ್ಷೇಮ.

ಧನುಸ್ಸು: ಕುಟುಂಬದಲ್ಲಿ ಗೊಂದಲ. ಯಾರೋ ಮಾಡಿದ ತಪ್ಪಿಗೆ ನೀವು ಬಲಿಯಾಗಬಹುದು ಜೋಕೆ. ಸಾಲಗಾರರ ಕಾಟ.

ಮಕರ: ಸ್ಥಾನಮಾನದ ನಷ್ಟ. ಆತ್ಮೀಯ ಸ್ನೇಹಿತನ ಭೇಟಿ. ಯೋಚಿಸಿ ಮಾತನಾಡಿ. ದೃಢವಾದ ಆರೋಗ್ಯ ಸ್ಥಿತಿ. ದಿನಾಂತ್ಯದಲ್ಲಿ ಶುಭವಾರ್ತೆ.

ಕುಂಭ: ಗೃಹ ನಿರ್ಮಾಣದ ವಿಚಾರದಲ್ಲಿ ಶುಭ ಸುದ್ದಿ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಹೆಂಡತಿ ಮಕ್ಕಳಿಂದ ಬೆಂಬಲ.

ಮೀನ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಪೇಕ್ಷಿತ ಧನಲಾಭ. ಮನೆಯಲ್ಲಿ ಸಂತಸದ ವಾತಾವರಣ. ನೆಮ್ಮದಿಯ ಕ್ಷಣಗಳು.

Edited By : Nirmala Aralikatti
PublicNext

PublicNext

21/06/2022 07:26 am

Cinque Terre

30.73 K

Cinque Terre

0