ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಇಂದಿನ ಭವಿಷ್ಯ

ಶ್ರೀ ಶುಭಕೃತ ನಾಮ ಸಂವತ್ಸರ

ಉತ್ತರಾಯಣ, ವಸಂತ ಋತು

ವೈಶಾಖ ಮಾಸ, ಶುಕ್ಲ ಪಕ್ಷ

ರಾಹುಕಾಲ : 12.20 ರಿಂದ 1.55

ಗುಳಿಕಕಾಲ : 10.46 ರಿಂದ 12.20

ಯಮಗಂಡಕಾಲ : 7.37 ರಿಂದ 9.11

ವಾರ : ಬುಧವಾರ

ತಿಥಿ : ಚತುರ್ಥಿ

ನಕ್ಷತ್ರ : ಮೃಗಶಿರ

ಮೇಷ: ಎಲ್ಲಿ ಹೋದರು ಅಶಾಂತಿ, ಕಾರ್ಯ ವಿಘಾತ, ಕೆಟ್ಟ ಮಾತುಗಳನ್ನು ಆಡುವುದು, ಆದಾಯಕ್ಕಿಂತ ಖರ್ಚು ಜಾಸ್ತಿ, ದೂರ ಪ್ರಯಾಣ.

ವೃಷಭ: ಹಿತಶತ್ರುಗಳನ್ನು ನಂಬಬೇಡಿ, ಅನಿರೀಕ್ಷಿತ ಧನ, ತೀರ್ಥಯಾತ್ರಾ ದರ್ಶನ, ಸಮಾಜದಲ್ಲಿ ಗೌರವ, ಶೀತ ಸಂಬಂಧ ರೋಗ.

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಔತಣ ಕೂಟಗಳಲ್ಲಿ ಭಾಗಿ, ಮನಶಾಂತಿ, ಮನೋಭಿಲಾಷೆ ಈಡೇರುವುದು.

ಕಟಕ: ಅನಾವಶ್ಯಕ ಖರ್ಚಿಗೆ ದಾರಿ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ದೂರಾಲೋಚನೆ, ಸಾಲಭಾದೆ.

ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿ ಕಲಹ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ಬಾಕಿ ಹಣ ಕೈ ಸೇರುವುದು.

ಕನ್ಯಾ: ಮಕ್ಕಳ ಅಗತ್ಯಕ್ಕೆ ಖರ್ಚು, ಸಂಕಟ, ಅತಿಯಾದ ಕೋಪ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ.

ತುಲಾ: ದಿನಸಿ ವ್ಯಾಪಾರಿಗಳಿಗೆ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಕ್ಕಳಿಂದ ದುಃಖ, ತಾಳ್ಮೆಯಿಂದ ಇರಿ.

ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿಧೇಯತೆ ಯಶಸ್ಸಿನ ಮೆಟ್ಟಿಲು, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.

ಧನಸ್ಸು: ಮಾತಿನ ಚಕಮಕಿ, ದುರಾಭ್ಯಾಸಕ್ಕೆ ಖರ್ಚು, ಮಿತ್ರರಿಂದ ಕೆಡಕು, ಗೊಂದಲಮಯ ವಾತಾವರಣ.

ಮಕರ: ನಿಮ್ಮ ಸಾಧನೆಯನ್ನು ಕೊಂಡಾಡುವರು, ಷೇರು ಮಾರುಕಟ್ಟೆಯಲ್ಲಿ ಲಾಭ, ನೀವಾಡುವ ಮಾತಿನಿಂದ ಅನರ್ಥ.

ಕುಂಭ: ಸ್ವಯಂಕೃತ ನಿಂದನೆ, ಅತಿಯಾದ ದೇಹಾಲಸ್ಯ, ಚಂಚಲ ಸ್ವಭಾವ, ಪ್ರತಿನಿಧಿಗಳಿಗೆ ಉತ್ತಮ ಆದಾಯ.

ಮೀನ: ಪಿತೃವಿನಿಂದ ಸಹಾಯ, ಬದುಕಿಗೆ ಉತ್ತಮ ತಿರುವು, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಿವಾಹಿತರಿಗೆ ವಿವಾಹಯೋಗ.

Edited By :
PublicNext

PublicNext

04/05/2022 07:07 am

Cinque Terre

32.37 K

Cinque Terre

0